Belagavi NewsBelgaum NewsKannada News

ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ: ದೂರು ದಾಖಲು


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬೈಲಹೊಂಗಲದಿಂದ ಗೋವಾ ರಾಜ್ಯದ ಕಸಾಯಿಖಾನೆಗೆ ಸಾಗಿಸುತ್ತಿದ್ದ 12 ಸಜೀವ
ಎಮ್ಮೆಗಳನ್ನು ರಕ್ಷಿಸಿರುವ ಖಾನಾಪುರ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು
ವಾಹನಸಮೇತ ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ಪಟ್ಟಣದ ಹೊರವಲಯದ ಜತ್ತ-ಜಾಂಬೋಟಿ
ರಾಜ್ಯ ಹೆದ್ದಾರಿಯ ಹರಸನವಾಡಿ ಹತ್ತಿರ ಸೋಮವಾರ ಮಧ್ಯಾಹ್ನ ಜರುಗಿದೆ.
ಪಟ್ಟಣದಿಂದ ಜಾಂಬೋಟಿಯತ್ತ ಹೊರಟಿದ್ದ ಕಂಟೇನರ್ ವಾಹನವನ್ನು ಪೊಲೀಸರು ತಡೆದು ತಪಾಸಣೆ
ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಬೈಲಹೊಂಗಲ ತಾಲ್ಲೂಕು ಸಂಪಗಾಂವ ಗ್ರಾಮದವರಾದ
ಅಲ್ತಾಫ್ ಕಾದ್ರೊಳ್ಳಿ ಮತ್ತು ಸೀರಾಜ ಬುದಿಹಾಳ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ
ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಜೀವಂತ ಎಮ್ಮೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು
ಪೊಲೀಸರು ತಿಳಿಸಿದ್ದಾರೆ.
ಎಸ್.ಪಿ ಸಂಜೀವ ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ
ಇನ್ಸಪೆಕ್ಟರ್ ಮಂಜುನಾಥ ನಾಯ್ಕ, ಪಿ.ಎಸ್.ಐ. ಗಿರೀಶ ಎಂ, ಮುಖ್ಯ ಪೇದೆ ರವಿ ಗೋಣಿ
ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button