Kannada NewsKarnataka News

ಗೋರಕ್ಷಣೆಗಾಗಿ ಹೋರಾಟ ನಿರಂತರವಾಗಿರಲಿ

ಗೋರಕ್ಷಣೆಗಾಗಿ ಹೋರಾಟ ನಿರಂತರವಾಗಿರಲಿ

’ಗಾವೋ ವಿಶ್ವಸ್ಯ ಮಾತರಃ’ ಎಂಬ ಸುಪ್ರಸಿದ್ಧ ಮಾತಿದೆ. ಇಡೀ ವಿಶ್ವಕ್ಕೆ ಗೋಮಾತೆಯೇ ತಾಯಿ ಎಂದು ಸಮಸ್ತ ಭಾರತೀಯರು ನಂಬಿದ್ದಾರೆ. ಪ್ರಾಚೀನ ಕಾಲದ ಋಷಿ ಮುನಿಗಳ ಪ್ರಕಾರ- ಗೋವುಗಳ ಕೊಂಬುಗಳಲ್ಲಿ ಸೂರ್ಯ ಚಂದ್ರರು, ಎರಡು ಕಣ್ಣುಗಳಲ್ಲಿ ಬ್ರಹ್ಮ ಮಹೇಶ್ವರರು, ಹಣೆಯಲ್ಲಿ ಮಹಾವಿಷ್ಣು ನೆಲೆಸಿದ್ದಾರೆ. ನಾಲ್ಕು ಕಾಲುಗಳನ್ನು ನಾಲ್ಕು ವೇದಗಳಿಗೂ, ಪಾದದ ಎಂಟು ಗೊರಸನ್ನು ಎಂಟು ದಿಕ್ಕುಗಳಿಗೂ, ಬಾಲವನ್ನು ಸರ್ಪಕ್ಕೂ ಹೋಲಿಸಿದ್ದಾರೆ. ಗೋವುಗಳ ಕೆಚ್ಚಲಿನಲ್ಲಿ ಅಮೃತವೇ ತುಂಬಿದೆ.

’ಆಕಳ ಹೊಟ್ಟೆಯಲ್ಲಿ ಅಚ್ಚೇರ ಬಂಗಾರ’ ಎಂಬ ಗ್ರಾಮೀಣರ ನಾಣ್ಣುಡಿ ಇಂದು ಸಂಶೋಧನೆ ಮೂಲಕ ಗೋಮೂತ್ರದಲ್ಲಿ ಬಂಗಾರವನ್ನು ಉತ್ಪಾದಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ೬೫ ಸಾವಿರ ಹಳ್ಳಿಗಳಿಂದ ಕೂಡಿದ ಕೃಷಿ ಪ್ರಧಾನವಾದ ಈ ದೇಶದಲ್ಲಿ ರೈತರ ಬೆನ್ನುಲೆಬು ಈ ಗೋಮಾತೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಮಸ್ತ ಹಿಂದೂ ಸಮಾಜವು ಗೋವುಗಳನ್ನು ಪವಿತ್ರವೆಂದು ಭಾವಿಸಿ, ಪೂಜಿಸುತ್ತಿರುವಾಗ ಕೆಲವು ಅನ್ಯಧರ್ಮೀಯ ಜೀಹಾದಿ ಮನಸ್ಸಿನವರು ಹಿಂದೂಗಳ ಮನ ನೋಯಿಸುವ ಏಕೈಕ ಉದ್ದೇಶದಿಂದಲೇ ಗೋಹತ್ಯೆಯನ್ನು ನಿರಂತರವಾಗಿ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಾಡಿರುವುದು ಸರ್ವರಿಗೂ ವೇದ್ಯವಾದ ಸಂಗತಿ. ಆದರೆ ಅದು ಅನುಷ್ಠಾನಕ್ಕೆ ಬರಲಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ.

200 ಗೋವುಗಳ ಹತ್ಯೆ

ರಂಜಾನ್, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಮ್ಮ ನಾಡಿನಲ್ಲಿ ಸಾವಿರಾರು ಗೋವುಗಳ ಹತ್ಯೆ ನಿರಾತಂಕವಾಗಿ ನಡೆಯುತ್ತಿದೆ. ಕಳೆದ ಒಂದು ವಾರದಲ್ಲಿ ಲಕ್ಷಾಂತರ ಗೋವುಗಳ ಹತ್ಯೆಯಾಗಿದೆ. ಬೆಳಗಾವಿ ನಗರ ಪ್ರದೇಶದಲ್ಲಿ ಜೀಹಾದಿ ಮನಸ್ಸಿನವರು ಸುಮಾರು ೨೦೦ ಗೋವುಗಳನ್ನು ಹತ್ಯೆ ಮಾಡಿದ್ದಾರೆ.

ಈ ವಿಷಯ ಪೋಲಿಸ್ ಇಲಾಖೆಗೆ ಮೊದಲೇ ತಿಳಿದಿತ್ತು. ಅಷ್ಟೇ ಅಲ್ಲದೆ ಬೆಳಗಾವಿ ಸಂಸದರು ಕೇಂದ್ರ ರೇಲ್ವೆ ಮಂತ್ರಿಗಳಾದ  ಸುರೇಶ ಅಂಗಡಿ ಅವರು ಮತ್ತು ಬೆಳಗಾವಿ ನಗರ ಶಾಸಕರಾದ  ಅನಿಲ ಬೆನಕೆಯವರು ಸ್ವತಃ ಪೋಲಿಸರಿಗೆ ದೂರು ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪೋಲಿಸ್ ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿ ಗೋವುಗಳ ಹತ್ಯೆ ನಡೆಯಿತು. ಪೋಲಿಸ್ ಇಲಾಖೆಯವರು ಒಬ್ಬ ಸಾಮಾನ್ಯ ವ್ಯಕ್ತಿ ನೋ ಪಾರ್ಕಿಂಗ್ ಮತ್ತು ಹೆಲ್ಮಟ್ ಹಾಕಲಿಲ್ಲ ಎಂಬ ಕಾರಣಕ್ಕಾಗಿ ಕಾನೂನು ಪ್ರಕಾರ ಸಾವಿರಾರು ರೂಪಾಯಿಗಳ ದಂಡ ವಿಧಿಸುತ್ತಾರೆ. ಬಡಪಾಯಿಗಳು ಒಮ್ಮೊಮ್ಮೆ ಇದರಿಂದ ತೀವ್ರ ತೊಂದರೆಗೆ ಒಳಗಾಗುತ್ತಾರೆ.

ಈ ವಿಷಯದಲ್ಲಿ ಕಟ್ಟುನಿಟ್ಟಾದ ಕಾನೂನು ಪಾಲಿಸುವ ಪೋಲಿಸರು ಗೋವುಗಳ ವಿಷಯ ಬಂದಾಗ ಅಸಡ್ಡೆಯಿಂದ ವರ್ತಿಸುತ್ತಾರೆ. ಈ ನಿರ್ಲಕ್ಷ್ಯದ ಹಿಂದೆ ಯಾವುದೋ ಒಂದು ಅಗೋಚರ ಶಕ್ತಿ ಅವರ ಬೆನ್ನಿಗೆ ನಿಂತಿದೆ ಎನಿಸುತ್ತದೆ. ಅವರ ಕರ್ತವ್ಯಪಾಲನೆಗೆ ಆ ಶಕ್ತಿ ತಡೆಯೊಡ್ಡುತ್ತಿದೆ ಎನಿಸುತ್ತದೆ.

ದುಷ್ಟಶಕ್ತಿಗಳಿಗೆ ಮಣಿದು…

ಪೋಲಿಸ್ ಇಲಾಖೆಗೆ ಗುಪ್ತಚರ ಇಲಾಖೆಯ ಮೂಲಕ ಎಲ್ಲ ವಿಷಯಗಳೂ ಸೂಕ್ಷ್ಮವಾಗಿ ಮೊದಲೇ ತಿಳಿದಿರುತ್ತವೆ. ಆದರೆ ಪ್ರಭಾವೀ ದುಷ್ಟಶಕ್ತಿಗಳಿಗೆ ಮಣಿದು ಅವರು ಕೈಚೆಲ್ಲಿ ಕುಳಿತುಕೊಳ್ಳುತ್ತಾರೆ.
ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿರುವ ಬಿ. ಎಸ್. ಯಡಿಯೂರಪ್ಪನವರು ಗೋಹತ್ಯೆ ನಿಷೇಧದ ಕುರಿತು ಸ್ಪಷ್ಟವಾದ ಒಂದು ಕಾನೂನು ತರಬೇಕಾದ ಅನಿವಾರ‍್ಯತೆ ಇದೆ. ಏಕೆಂದರೆ ನಮ್ಮ ಕೋರ್ಟ ನಿರ್ಣಯಗಳು ಕೂಡ ಅಸ್ಪಷ್ಟವಾಗಿವೆ. ಹೈಕೋರ್ಟ ಆದೇಶದ ಪ್ರಕಾರ ಗೋವುಗಳ ಹತ್ಯೆ ಮಾಡಬಾರದು.

ಆದರೆ ಸಣ್ಣ ಕರುಗಳು ಮತ್ತು ಎತ್ತುಗಳನ್ನು ಹತ್ಯೆ ಮಾಡಬಹುದು. ಇಂಥ ಅಯೋಮಯ ಕಾನೂನುಗಳು ರದ್ದಾಗಬೇಕು. ಕೃಷಿಕರ ಬದುಕಿಗೆ ಆಶ್ರಯವಾದ ಗೋವು, ಎತ್ತು, ಕರು ಎಲ್ಲವನ್ನೂ ಸಂರಕ್ಷಿಸುವ ಒಂದು ಸದೃಢ ಕಾನೂನು ಜಾರಿಗೆ ಬರಬೇಕು.
ಬೆಳಗಾವಿಯಲ್ಲಿ ಅನೇಕ ಅನಧಿಕೃತ ಕಸಾಯಖಾನೆಗಳ ವಿರುದ್ಧ, ಗೋಹಂತಕರ ವಿರುದ್ಧ, ಬಾಂಗ್ಲಾ ನುಸುಳುಕೋರರ ವಿರುದ್ಧ, ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಲವ್ ಜಿಹಾದ್ ಮತ್ತು ಮಾದಕ ವಸ್ತುಗಳ ಮಾರಾಟ ನಿಷೇಧಕ್ಕಾಗಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಮಠಾಧೀಶರಾದ  ಕಾರಂಜಿಮಠದ ಶ್ರೀಗಳು, ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ಅನೇಕ ಶ್ರೀಗಳು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರು.

ಅದರ ಪರಿಣಾಮವಾಗಿ ಬೆಳಗಾವಿಯಲ್ಲಿ ಇಂದು ಅನಧಿಕೃತ ಕಸಾಯಖಾನೆಗಳು ಇಲ್ಲ. ಆದರೂ ಅನ್ಯಧರ್ಮೀಯರು ತಮ್ಮ ಮನೆಯ ಮುಂದೆಯೇ ಗೋವುಗಳನ್ನು ಕೊಲ್ಲುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಈ ಕುರಿತು ಹಿಂದೂ ಸಮಾಜ ಬಾಂಧವರು ಇನ್ನಷ್ಟು ಎಚ್ಚರಿಕೆ ವಹಿಸಿ, ಇಂಥ ಕೃತ್ಯಗಳನ್ನು ತಡೆಯಲು ಪ್ರಯತ್ನಿಸಬೇಕಾಗಿದೆ.

ಕೃಷ್ಣ ಭಟ್, ರಾಜ್ಯ ಕೋಶಾಧ್ಯಕ್ಷರು
ವಿಶ್ವಹಿಂದೂ ಪರಿಷದ್
ಬೆಳಗಾವಿ, ಮೊ: ೯೮೮೦೪೪೬೫೮೭

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button