ಬಿಜೆಪಿ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ –
ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಜಾರಿ ನಿರ್ದೇಶನಾಲಯವನ್ನು ಉಪಯೋಗಿಸಿಕೊಂಡು ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಡಿಕೆ ಶಿವಕುಮಾರ್ ಮತ್ತು ಪಿ ಚಿದಂಬರಂ ರವರನ್ನು ಬಂಧಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆದಿದೆ.
ಬಿಜೆಪಿ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿ ರಾಯಲ್ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಜೆಎಸ್ ಆಂಜನೇಯಲು, ಕಾಂಗ್ರೆಸ್ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಸುಂಡಿ ನಾಗರಾಜು, ಬಳ್ಳಾರಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಬೋಯಪಾಟಿ ವಿಷ್ಣುವರ್ಧನ, ವಿಕ್ಕಿ , ವೆಂಕಟೇಶ್ ಹೆಗ್ಗಡೆ, ಶ್ರೀರಾಂಪುರ ನಾಗರಾಜು , ಕಾರ್ಪೊರೇಟರ್ಗಳಾದ ಕೆರೆಕೋಡಪ್ಪ, ಕಮೇಲ ಸೂರಿ, ಪರ್ವಿನ್ ಬಾನು, ಜಯಕುಮಾರ್ ನಾಯ್ಡು , ಅಲ್ಲಾಬಕಾಶ್, ಬಿ. ಕುಮಾರಸ್ವಾಮಿ, ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಅಜಂ, ನಿರಂಜನ್ ನಾಯ್ಡು, ಜೆ ಯರಿಸ್ವಾಮಿ , ಸಂತೋಷ ಸ್ವಾಮಿ, ನಾಗರಾಜ , ಶರ್ಮಾಸ ಸಾಬು, ಪ್ರೀತಿ, ಪ್ರವಲ್ಲಿಕಾ ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸಿಕ್ಕಿದ್ದೆಲ್ಲ ನನ್ನದೇ ಹಣ, ಅದಕ್ಕೆಲ್ಲ ದಾಖಲೆ ಇದೆ, ಬೇನಾಮಿ ಅಲ್ಲ
ಇಂದೇ ವಿಚಾರಣೆಗೆ ಹಾಜರಾಗಲಿರುವ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ