Kannada NewsKarnataka NewsLatest

ಕೃಷ್ಣಾ ತೀರದಲ್ಲಿ ಜೋಡಿ (?) ಶವ ಪತ್ತೆ

ಕೃಷ್ಣಾ ತೀರದಲ್ಲಿ ಜೋಡಿ (?) ಶವ ಪತ್ತೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ –

ಕೃಷ್ಣಾ ನದಿ ಪ್ರವಾಹ ಇಳಿಯುತ್ತಿದ್ದಂತೆ ನದಿ ತೀರದ ಗ್ರಾಮಸ್ಥರಿಗೆ ಶಾಕ್ ಉಂಟಾಗಿದೆ. ಚಿಕ್ಕೋಡಿ ತಾಲೂಕಿನ ಯಡೂರಿನ ನದಿ ತೀರದಲ್ಲಿ 2 ಅಪರಿಚಿತ ಶವಗಳು ಪತ್ತೆಯಾಗಿವೆ.

Home add -Advt
ಗುರುವಾರ ಸಾಯಂಕಾಲ ಕೃಷ್ಣಾನದಿಯ ತೀರದ ಯಡೂರಟೇಕ್ ವ್ಯಾಪ್ತಿಯಲ್ಲಿ ಅಂದಾಜು 40 ವಯಸ್ಸಿನ ಒಂದು ಗಂಡು ಮತ್ತು ಒಂದು ಹೆಣ್ಣಿನ ಶವಪತ್ತೆಯಾಗಿವೆ.
ಶವಗಳು ಯಾರದ್ದು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.
ಇತ್ತೀಚಿಗೆ ಕೃಷ್ಣಾನದಿಯ ಮಹಾಪ್ರವಾಹದ ಪರಿಸ್ಥಿತಿಯ ಶಾಕ್ ನಿಂದ ಚೇತರಿಸಿಕೊಳ್ಳುವ ಮುನ್ನ    ಈ ಅವಘಡ ಪತ್ತೆಯಾಗಿದೆ. ಇದು ನದಿ ತೀರದ ಜನರಲ್ಲಿ ಆತಂಕವನ್ನು ಮೂಡಿಸಿದೆ‌.
ಅಂಕಲಿ ಪಿ ಎಸ್ ಐ ಗಣಪತಿ ಕೂಗನ್ನೋಳ್ಳಿ ಸ್ಥಳಕ್ಕೆ ಭೆಟಿ ನೀಡಿ ಪ್ರಕರಣ ಖಿಲಿಸಿಕೊಂಡಿದ್ದಾರೆ.
ಪಿ ಡಿ ಓ ಪ್ರಭು ಚೆನ್ನೂರ, ಸ್ಥಳಿಯ ಗ್ರಾ ಪಂ ಸದಸ್ಯರ ನೇತೃತ್ವದಲ್ಲಿ ಪಂಚನಾಮೆ ಮಾಡಿ ಶವಸಂಸ್ಕಾರವನ್ನು ಮಾಡಲಾಗಿದೆ.

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)

Related Articles

Back to top button