ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೆಹಲಿ ಗಡಿ ಸಿಂಘು ಪ್ರದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತೆ ಜೋರಾಗಿದ್ದು. ಪರಿಸ್ಥಿತಿ ಕೈಮೀರಿದೆ.
ಪೊಲೀಸರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರುವಾಯು ಸಿಡಿಸಿದ್ದು, ಲಾಠಿ ಚಾರ್ಜ್ ಮಾಡಿದ್ದಾರೆ. ಹಲವು ಪೊಲೀಸರು ಹಾಗೂ ಪ್ರತಿಭಟನೆಕಾರರು ಗಾಯಗೊಂಡಿದ್ದಾರೆ.
ಜನೆವರಿ 26ರಂದು ದೆಹಲಿಯಲ್ಲಿ ಹಿಂಸಾಚಾರ ನಡೆದ ನಂತರ ಪ್ರತಿಭಟನೆ ತಗ್ಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಮತ್ತೆ ಪ್ರತಿಭಟನೆ ಬುಗಿಲೆದ್ದಿದೆ. ಸ್ಥಳೀಯ ನಾಗರಿಕರು ಪ್ರತಿಭಟನೆ ಸ್ಥಳ ತೆರವು ಮಾಡುವಂತೆ ರೈತರ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ. ಪೊಲೀಸರು ಕೂಡ ಪ್ರತಿಭಟನೆ ಸ್ಥಳ ತೆರವು ಮಾಡಲು ಪದೇ ಪದೆ ಸೂಚಿಸುತ್ತಿದ್ದಾರೆ.
ಆದರೆ ಪ್ರತಿಭಟನೆಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ಯಾವುದೇ ಕಾರಣದಿಂದ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಈಗ ತಲ್ವಾರ್ ಗಳನ್ನು ಬಳಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳೀಯ ನಾಗರಿಕರಿಗೂ ಪ್ರತಿಭಟನೆಕಾರರಿಗೂ ವಗ್ವಾದ, ಘರ್ಷಣೆ ನಡೆದಿದೆ. ಪೊಲೀಸರ ದೇಹದಿಂದ ರಕ್ತ ಸುರಿಯುತ್ತಿರುವ ದೃಷ್ಯ ಕಾಣುತ್ತಿದೆ.
ಪ್ರತಿಭಟನೆ ಸ್ಥಳದಲ್ಲಿ ಖಲಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಕೂಡ ಕೇಳಿಬಂದಿದೆ. ಕಲ್ಲು ತೂರಾಟ ಸಹ ಜೋರಾಗಿ ನಡೆಯುತ್ತಿದೆ. ಸಧ್ಯಕ್ಕೆ ಪರಿಸ್ಥಿತಿ ಪೊಲೀಸರ ಕೈ ಮೀರಿದೆ. ಪೊಲೀಸರನ್ನು ಅಟ್ಟಾಡಿಸಿ ಹೊಡೆಯುವ ಮಟ್ಟಕ್ಕೆ ಹೋಗಿದೆ. ಲಾಠಿಚಾರ್ಜ್ ನಿಂದಲೂ ನಿಯಂತ್ರಿಸಲು ಆಗುತ್ತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ