Belagavi NewsBelgaum NewsKannada NewsKarnataka NewsNational

*ಕೊಯ್ನಾ ಜಲಾಶಯದಿಂದ ಪ್ರತಿ ಅರ್ಧಗಂಟೆಗೊಮ್ಮೆ ಮಾಹಿತಿ ಪಡೆಯುತ್ತಿದ್ದೇವೆ: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕುರಿತು ಕೊಲ್ಲಾಪುರ ಜಿಲ್ಲಾಧಿಕಾರಿಯ ಜೊತೆಗೆ ಒಂದು ಗಂಟೆಗೊಮ್ಮೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ. ನಮ್ಮ ಅಧಿಕಾರಿಗಳು ಕೊಯ್ನಾ ಜಲಾಶಯದಿಂದ ಪ್ರತಿ ಅರ್ಧಗಂಟೆಗೊಮ್ಮೆ ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಪಂಚಗಂಗಾ ನದಿ ಸತಾರದಿಂದ ಕೊಯ್ನಾ ಜಲಾಶಯದಿಂದ ನೀರು ಬಿಡುವ ಕುರಿತು ಪ್ರತಿಗಂಟೆಗೂಮ್ಮೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜಾಪುರ ಜಲಾಶಯದಿಂದ ಸುಮಾರು 1 ಲಕ್ಷ 80 ಸಾವಿರ ಕ್ಯೂಸೆಕ್ ನೀರು ಜಿಲ್ಲೆಗೆ ಬರುತ್ತದೆ. ಅದನ್ನು ದೂದಗಂಗಾ ನದಿಗೆ ಸೇರಿಸಿಕೊಂಡು ಕಲ್ಲೋಳ ಬ್ಯಾರೇಜ್ ಗೆ  2 ಲಕ್ಷ 25 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಎಲ್ಲ ನೀರು ಆಲಮಟ್ಟಿ ಜಲಾಶಯಕ್ಕೆ ಸೇರುತ್ತದೆ ಎಂದರು.

ಘಟಪ್ರಭಾ ನದಿಯಿಂದ 65 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ‌. ಇದು ಸಹ  ಆಲಮಟ್ಟಿಗೆ ಸೇರುತ್ತದೆ. ಸುಮಾರು 75 ರಿಂದ 3 ಲಕ್ಷ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯದಿಂದ ಬಿಡುಗಡೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಿಂದ ಬರುವ ನೀರನ್ನು ತಡೆ ಹಿಡಿಯಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದರು.

ಮಳೆಯ ಸಮಸ್ಯೆಯನ್ನು ಆಲಿಸಲು ಪ್ರತಿ ತಾಲೂಕಿನಲ್ಲಿ ನೂಡಲ್ ಆಫೀಸರ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರವಾಹದ ಹೆಲ್ಪ್ ಲೈನ್ ಸಹ ಮಾಡಲಾಗಿದೆ‌. ಕೊಯ್ನಾ ಜಲಾಶಯದಿಂದಲೂ ನಮ್ಮ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ. ಜತ್ರಾಟ ಬ್ಯಾರೇಜ್ ನಿಂದಲೂ ಸಹ ನಮಗೆ ಮಾಹಿತಿ ಬರುತ್ತಿದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button