
ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕ ಪೊಲೀಸ್ ಎನ್ ಕೌಂಟ್ ರಲ್ಲಿ ಬಲಿಯಾಗಿದ್ದಾನೆ.
ಬಿಹಾರ ಮೂಲದ ರಿತೇಶ್ ಎನ್ ಕೌಂಟರ್ ನಲ್ಲಿ ಹತನಾಗಿರುವ ಆರೋಪಿ. ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಅಶೋಕ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಚಾಕೋಲೆಟ್ ಆಸೆ ತೋರಿಸಿ ಹೊತ್ತೊಯ್ದ ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಂದು ಅಶೋಕನಗರದ ಪಾಳು ಮನೆಯ ಶೆಡ್ ನಲ್ಲಿ ಮೃತದೇಹವಿಟ್ಟು ಎಸ್ಕೇಪ್ ಆಗಿದ್ದ.
ಬಾಲಕಿಯನ್ನು ಮನೆಬಳಿಯಿಂದ ಹೊತ್ತೊಯ್ದ ದೃಶ್ಯ ಸಿಸಿಕ್ಯಾಮರದಾಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಅಶೋಕನಗರ ಠಾಣೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೇ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸ್ಥಳ ಮಹಜರು ನಡೆಸಲು ಆರೋಪಿಯನ್ನು ಕರೆ ತಂದ ವೇಳೆ ಆರೋಪಿ ರಾಯನಾಳ ಸೇತುವೆ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಲ್ಲೆ ವೇಳೆ ಲೇಡಿ ಪಿಎಸ್ ಐ ಅನ್ನಪೂರ್ಣ ಅವರಿಗೆ ಗಾಯಗಳಾಗಿವೆ. ತಕ್ಷಣ ಆತ್ಮರಕ್ಷಣೆಗಾಗಿ ಲೇಡಿ ಪಿಎಸ್ ಐ ಅನ್ನಪೂರ್ಣ, ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟು ಆರೋಪಿಯ ಬೆನ್ನಿಗೆ ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬಾಲಕಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಹಾಗೂ ಕೊಲೆ ನಡೆಸಿದ್ದ ಕಾಮುಕನನ್ನು ಕೆಲವೇ ಗಂಟೆಗಳಲ್ಲಿ ಹಿಡಿದು ಮಹಿಳಾ ಪಿಎಸ್ ಐ ಓರ್ವರು ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಕೊಂದಿದ್ದು ಶ್ಲಾಘನೆ ವ್ಯಕ್ತವಾಗಿದೆ. ಇದು ಇತರ ಆರೋಪಿಗಳಿಗೆ ಪಾಠವಾಗಿದೆ. ಅಲ್ಲದೇ ಲೇಡಿ ಪಿಎಸ್ ಐ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾತ್ರವಲ್ಲ, ರಾಜ್ಯಾದ್ಯಂತ, ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.
ಪಿಎಸ್ ಐ ಅನ್ನಪೂರ್ಣ ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ರೈತ ಕುಟುಂಬದಿಂದ ಬಂದವರು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂಎಸ್ ಸಿ ಪದವಿಯಲ್ಲಿ ಚಿನ್ನದ ಪದಕಪಡೆದ ಪ್ರತಿಭಾವಂತೆ. ತಾನು ಬಯಸಿದಂತೆ ಪೊಲೀಸ್ ಇಲಾಖೆಗೆ ಸೇರಿ ಈಗ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.