ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವಕನೊಬ್ಬನಿಗೆ ಮೂತ್ರ ಕುಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ ಐ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಯ ಸಬ್ ಇನ್ಸ್ ಪೆಕ್ಟರ್ ಅರ್ಜುನ್ ಅವರನ್ನು ಬೆಂಗಳೂರಿನಲ್ಲಿ ಸಿಐಡಿ ಬಂಧಿಸಿದೆ.
ಮಹಿಳೆಯೊಬ್ಬರಿಗೆ ಕರೆ ಮಾಡಿ ಕಿರುಕುಳ ನೀಡಿದ ವಿಚಾರವಾಗಿ ತನ್ನನ್ನು ಠಾಣೆಗೆ ಕರೆದೊಯ್ದ ಪಿಎಸ್ ಐ ಅರ್ಜುನ್, ನನ್ನನ್ನು ಹಿಡಿದು ಥಳಿಸಿದ್ದಾರೆ. ಅಲ್ಲದೇ ಕುಡಿಯಲು ನೀರು ಕೇಳಿದರೆ ವ್ಯಕ್ತಿಯೊಬ್ಬರಿಂದ ನನ್ನ ಬಾಯಿಗೆ ಮೂತ್ರ ಹುಯ್ಯಿಸಿದ್ದರು. ಅಲ್ಲದೇ ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನೂ ನೆಕ್ಕಿಸಿದ್ದರು ಎಂದು ಯುವಕ ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಿಸಿದ್ದ.
ಪರಿಶಿಷ್ಠ ಸಮುದಾಯದ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಡಿಜಿಪಿ ಬಿ.ಎಸ್.ಸಂಧು ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದ ಎಸ್ ಪಿ ರವಿ ಚೆನ್ನಣ್ಣನವರ್ ನೇತೃತ್ವದ ತಂಡ ಇದೀಗ ಆರೋಪಿ ಪಿಎಸ್ ಐ ಅವರನ್ನು ಬಂಧಿಸಿದೆ.
ಕಾನ್ಸ್ ಟೇಬಲ್ ಜೊತೆ ಪತ್ನಿ ಕಳ್ಳಾಟ; ಪೊಲೀಸ್ ಪೇದೆಯನ್ನು ಕಟ್ಟಿಹಾಕಿ ಥಳಿಸಿದ ಪತಿ
ಬಾಲಿವುಡ್ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ