ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮತ್ತೋರ್ವ ಕಾನ್ಸ್ ಟೇಬಲ್ ನ್ನು ಬಂಧಿಸಿದ್ದಾರೆ.
ಅಕ್ರಮದ ಮೂಲಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ ಟೇಬಲ್ ಇಸ್ಮಾಯಿಲ್ ನನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಪರೀಕ್ಷೆ ಬರೆದು ಇಸ್ಮಾಯಿಲ್ ಇನ್ ಸರ್ವೀಸ್ ಕೋಟಾದಲ್ಲಿ ಆಯ್ಕೆಯಾಗಿದ್ದ.
ಮಹಾರಾಷ್ಟ್ರದ ಪುಣೆಯಲ್ಲಿ ತಲೆಮರೆಸಿಕೊಂಡಿದ್ದ ಇಸ್ಮಾಯಿಲ್ ನನ್ನು ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆ, ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್ ಸೇರಿದಂತೆ 6 ಜನರ ವಿರುದ್ಧ ಸಿಐಡಿ ಡಿವೈ ಎಸ್ ಪಿ ಪ್ರಕಾಶ್ ರಾಠೋಡ್, ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಸ್ಮಾಯಿಲ್ ಗಾಗಿ ಶೋಧ ನಡೆಸಿದ್ದ ಸಿಐಡಿ ಇದೀಗ ಪುಣೆಯಲ್ಲಿ ಬಂಧಿಸಿದೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗಿದೆ.
ಮಳೆ ಅಬ್ಬರದ ನಡುವೆಯೇ ಮತ್ತೆ ವ್ಯಾಪಕವಾಗಿ ಹರಡುತ್ತಿದೆ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ