![](https://pragativahini.com/wp-content/uploads/2023/04/Lokayukta-jpg.webp)
ಪ್ರಗತಿವಾಹಿನಿ ಸುದ್ದಿ: ಪ್ರಕರಣ ಒಂದನ್ನು ಇತ್ಯರ್ಥಪಡಿಸಲು ಲಂಚ ಸ್ವೀಕರಿಸುತ್ತಿದ್ದ ಪಿಎಸ್‌ಐ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರಿನ ಬೆಟ್ಟದಪುರ ಠಾಣೆಯಲ್ಲಿ ನಡೆದಿದೆ.
ಮೈಸೂರಿನ ಬೆಟ್ಟದಪುರ ಠಾಣೆ ಪಿಎಸ್‌ಐ ಶಿವಶಂಕರ್ 80 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇದೇ ವೇಳೆ ಆರೋಪಿ ನೇರವಾಗಿ ಅಧಿಕಾರಿ ವರ್ಗದ ಕೈಗೆ ಸಿಕಿಬಿದ್ದಿದ್ದಾರೆ. ತಕ್ಷಣ ಪಿಎಸ್‌ಐ ಶಿವಶಂಕರ್‌ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ಪಿಎಸ್‌ಐ ದುಡ್ಡಿಗಾಗಿ ಡಿಮ್ಯಾಂಡ್ ಇಟ್ಟಿದ್ದ ಕಾರಣಕ್ಕೆ ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಪ್ಲಾನ್ ಮಾಡಿ ಆರೋಪಿಯನ್ನು ಬಲೆಗೆ ಬೀಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ