Latest

ಪಿಎಸ್ ಐ ಹುದ್ದೆ ಅಕ್ರಮ; 8 ಪೊಲೀಸ್ ಸಿಬ್ಬಂದಿ ಸೇರಿ 54 ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 545 ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಇದುವರೆಗೂ ಸಿಐಡಿ ಅಧಿಕಾರಿಗಳು ಬಂಧಿಸಿರುವ ಆರೋಪಿಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವ 6 ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಲಿಂಗಸಗೂರು ಡಿವೈ ಎಸ್ ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರಿ, ಕಾನ್ಸ್ ಟೇಬಲ್ ಸೋಮನಾಥ್, ಸೇರಿದಂತೆ ಪ್ರಕರಣಕ್ಕೆ ಸಾಥ್ ನೀಡಿದ್ದ 8 ಜನ ಪೊಲೀಸ್ ಸಿಬ್ಬಂದಿ, ಅಭ್ಯರ್ಥಿಗಳಾದ ಹೆಚ್.ವಿ ರಘುವೀರ್, ಎಂ.ಸಿ.ಚೇತನ್ ಕುಮಾರ್, ಸಿ.ವೆಂಕಟೇಶ್ ಗೌಡ, ಮಮತೇಶ್ ಗೌಡ, ಆರ್.ಮಧು, ಸಿ.ಕೆ.ದಿಲೀಪ್ ಕುಮಾರ್, ಹೆಚ್.ಆರ್.ಪ್ರವೀಣ್ ಕುಮಾರ್, ಸೂರ್ಯನಾರಾಯಣ, ಸಿ.ಎಂ.ನಾಗರಾಜ, ಗಜೇಂದ್ರ, ಯಶವಂತ್ ದೀಪ್, ಮನುಕುಮಾರ್, ಜಿ.ಸಿ.ರಾಘವೇಂದ್ರ, ನಾಗೇಶ್ ಗೌಡ, ಆರ್.ಮಧು, ಯಶವಂತ ಗೌಡ, ರಾಜಕೀಯ ಮುಖಂಡರಾದ ದಿವ್ಯಾ ಹಾಗರಗಿ, ಆರ್.ಡಿ.ಪಾಟೀಲ್, ಮಹಾಂತೇಶ್ ಪಾಟೀಲ್ ಸೇರಿದಂತೆ ಒಟ್ಟು 54 ಆರೋಪಿಗಳನ್ನು ಬಂಧಿಸಲಾಗಿದೆ.

ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಾಥ್ ನೀಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ನರ್ಸಿಂಗ್ ಪರೀಕ್ಷೆ ಅಕ್ರಮದಲ್ಲಿಯೂ ದಿವ್ಯಾ ಕೈವಾಡವಿದೆ ಎನ್ನಲಾಗುತ್ತಿದೆ. ಕಲಬುರ್ಗಿಯಲ್ಲಿ ಸ್ವಂತ ನರ್ಸಿಂಗ್ ಕಾಲೇಜು ಹೊಂದಿರುವ ದಿವ್ಯಾ ಹಾಗರಗಿ, ನರ್ಸಿಂಗ್ ಪರೀಕ್ಷಾ ಕೇಂದ್ರವನ್ನು ಮಂಜೂರು ಮಾಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
2,500 ಕೋಟಿ ರೆಡಿ ಮಾಡಿ, ಸಿಎಂ ಮಾಡ್ತೀವಿ ಎಂದು ಕರೆದಿದ್ರು; ಶಾಸಕ ಯತ್ನಾಳ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button