Latest

ಪಿಎಸ್ ಐ ಗೆ ಧಮ್ಕಿ; ವಿರೋಧಿಗಳ ಕುತಂತ್ರ ಎಂದ ಬಿಜೆಪಿ ಶಾಸಕ ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮಲ್ಲಂದೂರು ನೂತನ ಪಿಎಸ್ ಐ ರವೀಶ್ ಅವರಿಗೆ ಧಮ್ಕಿ ಹಾಕಿದ ಆಡಿಯೋ ವೈರಲ್ ವಿಚಾರವಾಗಿ ಸ್ಪಷ್ಟನೆ ನೀಡಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಇದು ವಿರೋಧಿಗಳು ನನ್ನ ವಿರುದ್ಧ ನಡೆಸುತ್ತಿರುವ ಕುತಂತ್ರ ಎಂದು ತಿಳಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಕುಮಾರಸ್ವಾಮಿ, ಮಲ್ಲಂದರೂ ಪಿಎಸ್ ಐ ಅವರೊಂದಿಗೆ ಮಾತುಕತೆ ಆಡಿಯೋ ನನ್ನ ವಿರೋಧಿಗಳು ಮಾಡುತಿರುವ ಷಡ್ಯಂತ್ರ್ಯ. ಈ ಹಿಂದೆ ಇದೇ ಪಿಎಸ್ ಐ ರವೀಶ್, ನನ್ನ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ನಾನು ಮಲ್ಲಂದೂರು ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಅತ್ಯಂತ ಹಿಂದುಳಿದ ವರ್ಗದ ಜನರು. ನೀವು ಮಂಡ್ಯದವರಾಗಿದ್ದರಿಂದ ನಿಮ್ಮ ಭಾಷೆಯ ವ್ಯತ್ಯಾಸವಿರುತ್ತದೆ. ಅಲ್ಲದೆ ಅನುಭವದ ಕೊರತೆಯಿರುವುದರಿಂದ ಇಲ್ಲಿನ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಸಿದ್ದೆ. ಅದನ್ನು ಹೊರತುಪಡಿಸಿ ಬೇರೆ ಯಾವ ವಿಚಾರವನ್ನೂ ಮಾತನಾಡದೇ ಕಳುಹಿಸಿದ್ದೇನೆ.

Home add -Advt

ಆದರೆ ಈಗ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ತಾರದೇ ರವೀಶ್ ಕೆಲಸಕ್ಕೆ ಹಾಜರಾಗಿದ್ದಾರೆ. ಇದರಿಂದ ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿದ್ದರಿಂದ ಓರ್ವ ಶಾಸಕನಾಗಿ ನಾನೇ ಮಾತಾನಾಡಬೇಕಿತ್ತು. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ನನಗೆ ಪ್ರತಿದಿನ ಹತ್ತಾರು ಕರೆಗಳು ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಆಗಿದೆ.

ಆದರೆ ನಾನು ಒಕ್ಕಲಿಗ ವಿರೋಧಿ ಎಂದು ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು, ನನ್ನ ಜತೆಗಾರರಲ್ಲಿ ಬಹುತೇಕರು ಒಕ್ಕಲಿಗ ನಾಯಕರೇ ಇದ್ದಾರೆ. ಆಡಿಯೋ ವಿಚಾರವಾಗಿ ವೈರಲ್ ಆಗಿರುವ ಸುದ್ದಿಯನ್ನು ಯಾರೂ ನಂಬಬೇಡಿ ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯನ್ನು ಬಾಯಿಗೆ ಬಂದಂತೆ ಬೈದು ಆವಾಜ್ ಹಾಕಿದ ಬಿಜೆಪಿ ಶಾಸಕ ಕುಮಾರಸ್ವಾಮಿ
ಬಿಜೆಪಿ ನಾಯಕ ತಜಿಂದರ್ ಅರೆಸ್ಟ್

Related Articles

Back to top button