ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿಗಾಗಿ ಕೊಪ್ಪಳ ಜಿಲ್ಲೆಯ ಕನಕಗಿರಿ ಬಿಜೆಪಿ ಶಾಸಕರು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಶಾಸಕರ ವಿಡಿಯೋ ಬಿಡುಗಡೆ ಮಾಡಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಶಿವರಾಜ್ ತಂಗಡಗಿ, ಪಿಎಸ್ ಐ ಹುದ್ದೆ ನೇಮಕಾತಿಗಾಗಿ ಶಾಸಕ ಬಸವರಾಜ್ ದಡೆಸೂಗುರು ಅಭ್ಯರ್ಥಿಯ ತಂದೆ ಪರಸಪ್ಪ ಎಂಬುವವರಿಂದ 15 ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂಬ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸೆ.5ರಂದು ಶಾಸಕ ದಡೇಸೂಗುರು ಹಾಗೂ ಪರಸಪ್ಪ ಅವರ ಆಡಿಯೋ ವೈರಲ್ ಆಗಿತ್ತು. ಬಳಿಕ ಸೆ.6ರಂದು ಶಾಸಕರ ಮತ್ತೊಂದು ಆಡಿಯೋ ಬಿಡುಗಡೆಯಾಗಿತ್ತು. ವೈರಲ್ ಆದ ಆಡಿಯೋ ನನ್ನದೇ ಎಂದು ಶಾಸಕರು ಸ್ಪಷ್ಟೀಕರಣ ನೀಡಿದ್ದರು. ಅದಾದ ಕೆಲವೇ ಘಂಟೆಗಳಲ್ಲಿ ಶಾಸಕರು ಆಡಿಯೋ ನನ್ನದಲ್ಲ ಎಂದು ಉಲ್ಟಾಹೊಡೆದಿದ್ದಾರೆ. ಈ ಎಲ್ಲಾ ಘಟನೆಗಳು ನಡೆದು 1 ವಾರವಾದ್ರೂ ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಶಾಸಕರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
ಪರಸಪ್ಪ ಅವರು ತನ್ನ ಮಗ ಪಿಎಸ್ ಐ ನೇಮಕಾತಿಯಲ್ಲಿ ಫಿಸಿಕಲ್ ಟೆಸ್ಟ್ ನಲ್ಲಿ ಪಾಸ್ ಆಗಿರಲಿಲ್ಲ ಎಂದು ಹೇಳಿದ್ದಾರೆ. ಶಾಸಕರೇ ಅವರನ್ನು ಬೆಂಗಳೂರಿಗೆಬ್ ಕರೆಸಿಕೊಂಡು ಶಾಸಕರ ಭವನದಲ್ಲಿಯೇ ಹಣ ಪಡೆದಿದ್ದಾರೆ. ಯಾರ್ಯಾರು ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಸ್ವತ: ಪರಸಪ್ಪ ಹೇಳಿದ್ದಾರೆ. ಶಾಸಕ ದಡೇಸೂಗುರು ಹಣ ಪಡೆದ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಸರ್ಕಾರದ ಶಾಸಕರೊಬ್ಬರು ರಾಜಾರೋಷವಾಗಿ ಲಂಚ ಪಡೆಯುತ್ತಿದ್ದರೂ ಸರ್ಕಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ಮೂರು ವರ್ಷದ ಆಡಳಿತದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸೌಜನ್ಯವೂ ಇಲ್ಲ ಆದರೂ ಸಿಎಂ ಹೇಳುತ್ತಿದ್ದಾರೆ ಧೈರ್ಯವಿದ್ದರೆ, ತಾಕತ್ತದ್ದಿದ್ದರೆಬಿಜೆಪಿ ತಡೆಯಿರಿ ಎಂದು. ಇಂತಹ ಸರ್ಕಾರಕ್ಕೆ ಏನನ್ನಬೇಕು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ ಸಿ.ಟಿ.ರವಿ
https://pragati.taskdun.com/politics/c-t-ravisiddaramaiahstatments/
ಉಮೇಶ್ ಕತ್ತಿ ಬಗ್ಗೆ ವಿವರಿಸುತ್ತಾ ಭಾವುಕರಾದ ಸಿಎಂ ಬೊಮ್ಮಾಯಿ
https://pragati.taskdun.com/politics/karnataka-sessionvidhanasabhevidhana-parishatsiem-basavaraaj-bommai-emotions/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ