ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪಿಎಸ್ ಐ ಹುದ್ದೆ ನೇಮಾಕಾತಿ ಅಕ್ರಮದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್ ಬೆಂಬಲಿಗರಿಂದ ಮತ್ತೆ ಮೂರು ಆಡಿಯೋ ಬಿಡುಗಡೆ ಮಾಡಲಾಗಿದೆ.
ರುದ್ರೇಗೌಡ ಪಾಟೀಲ್ ಸಿಐಡಿ ಕಸ್ಟಡಿಯಲ್ಲಿದ್ದಾಗ ಸಿಐಡಿ ತನಿಖೆ ವೇಳೆ ಕದ್ದು ಡಿವೈಸ್ ಬಳಸಿ ಸಿಐಡಿ ಅಧಿಕಾರಿಗಳ ಹಣ ರಿಕವರಿ ಪ್ರಶ್ನೆಗಳನ್ನು ರೆಕಾರ್ಡ್ ಮಾಡಿದ್ದಾನೆ. ಇದೀಗ ಈ ಆಡಿಯೋಗಳನ್ನು ರುದ್ರೇಗೌಡ ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದಾನೆ.
ಸಿಐಡಿ ವಿಚಾರಣೆ ವೇಳೆ ರುದ್ರೇಗೌಡ ಪದೇ ಪದೇ ಬಾತ್ ರೂಮ್ ನೆಪದಲ್ಲಿ ಹೊರಹೋಗುತ್ತಿದ್ದ. ಈ ವೇಳೆ ಸ್ನೇಹಿತರಿಂದ ಡಿವೈಸ್ ತರಿಸಿಕೊಂಡು ಗೌಪ್ಯವಾಗಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಆಡಿಯೋ ಇಟ್ಟುಕೊಂದು ರುದ್ರೇಗೌಡ ಪಾಟೀಲ್ ಸಿಐಡಿ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತಿ ಸಿಐಡಿ ಡಿವೈಎಸ್ ಪಿ ಶಂಕರಗೌಡ ಅವರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಣದ ಆಮಿಷಕ್ಕೆ ಬಗ್ಗದೇ ಇದ್ದಾಗ ಇದೀಗ ಅಡಿಯೋ ಬಿಡಿಗಡೆ ಮಾಡುತ್ತಿದ್ದಾನೆ. ಈ ಮೂಲಕ ತಮ್ಮನ್ನು ಕುಗ್ಗಿಸಲು ಆರೋಪಿ ರುದ್ರೇಗೌಡ ಪಾಟೀಲ್ ಯತ್ನಿಸುತ್ತಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಸಿಐಡಿ ತನಿಖಾಧಿಕಾರಿ ಶಂಕರೇಗೌದ ಜತೆ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಬಿಡಿಗಡೆಯಾಗಿತ್ತು. ಇದರ ಬೆನ್ನಲ್ಲೇ ಮತ್ತೆ ಮುರು ಅಡಿಯೀ ಬಿಡುಗಡೆಯಾಗಿದೆ ಎನ್ನಲಾಗಿದೆ.
*ಶೀತಗಾಳಿ ನಡುವೆಯೇ ರಾಜ್ಯದಲ್ಲಿ ಮಳೆ ಎಚ್ಚರಿಕೆ*
https://pragati.taskdun.com/karnatakarain2days-coldwave/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ