
ಪ್ರಗತಿವಾಹಿನಿ ಸುದ್ದಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪಿಎಸ್ ಐ ಓರ್ವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಲಘಟ್ಟಪುರ ಮೆಹಬೂಬ್ ಗುಡ್ಡಳ್ಳಿ ಮೃತ ಪಿಎಸ್ ಐ. ಅಪರಾಧಿಗಳನ್ನು ಹಿಡಿಯಲು ಹೋಗುತ್ತಿದ್ದಾಗ ಕೈಕೊಟ್ಟ ಕಾರನ್ನು ಪರುಶೀಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಿಎಸ್ ಐ ಮೆಹಬೂಬ್ ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳು ಪಿಎಸ್ ಐ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.