Latest

ಪತ್ನಿಗೆ ಕಿರುಕುಳ; PSI ಪತಿ ವಿರುದ್ಧ ಎಫ್ ಐ ಆರ್ ದಾಖಲು; ಹೆಂಡತಿ ವಿರುದ್ಧವೂ ದೂರು ದಾಖಲಿಸಿದ ಪೊಲೀಸ್ ಅಧಿಕಾರಿ

ಪ್ರಗತಿವಾಹಿನಿ ಸುದ್ದಿ; ದೇವನಹಳ್ಳಿ: ಸಬ್ ಇನ್ಸ್ ಪೆಕ್ಟರ್ ಪತ್ನಿಯೋರ್ವರು ಪತಿ ವಿರುದ್ಧ ಮೋಸ, ಕಿರುಕುಳ ಆರೋಪ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಸೂಲಿಬೆಲೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮೇಶ್ ಗೂಗರಿ ವಿರುದ್ಧ ಪತ್ನಿ ರಾಶಿ ದೂರು ದಾಖಲಿಸಿದ್ದಾರೆ. ಪತಿ ರಮೇಶ್ ಸುಳ್ಳು ತಂದೆ ತಾಯಿಯನ್ನು ಸೃಷ್ಟಿಸಿ, ತನ್ನನ್ನು ರಿಜಿಸ್ಟರ್ ಮದುವೆಯಾಗಿದ್ದೂ ಅಲ್ಲದೇ ಬಳಿಕ ಬೇರೊಂದು ವಿವಾಹವಾಗಿದ್ದಾರೆ. ತನ್ನನ್ನು ಮದುವೆಯಾಗಿ ವಂಚಿಸಿ, ಮತ್ತೊಂದು ವಿವಾಹವಾಗಿ ಈಗ ನನಗೆ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಯುವತಿಯರೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿಗೆ ಕಿರುಕುಳ ಆರೋಪ ತಳ್ಳಿ ಹಾಕಿರುವ ಪಿಎಸ್ ಐ ರಮೇಶ್, ತಾನು ರಾಶಿಯನ್ನು ಪ್ರೀತಿಸಿ ವಿವಾಹವಾಗಿದ್ದೆ. ಆದರೆ ಮದುವೆ ಬಳಿಕ ಅವಳು ತನಗೆ ಊರಿಗೆ ಹೋಗಲು ಬಿಡದೇ ತಂದೆ ತಾಯಿಯನ್ನು ನೋಡಲು ಬಿಡದೇ ಕಿರುಕುಳ ನೀಡುತ್ತಿದ್ದಳು ಎಂದು ಠಾಣೆಯಲ್ಲಿ ಪತ್ನಿಯ ವಿರುದ್ಧವೇ ದೂರು ನೀಡಿದ್ದಾರೆ.

ಪಿಎಸ್ ಐ ಪತಿ ಹಾಗೂ ಪತ್ನಿ ಜಗಳ ತಾರಕಕ್ಕೇರಿದ್ದು, ಪತ್ನಿ ರಾಶಿ ನ್ಯಾಯಕ್ಕಾಗಿ ಪೊಲೀಸ್ ವರಿಷ್ಥಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾಳೆ.
ಲೋಕವಾರ್ತೆ ದಿನಪತ್ರಿಕೆ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆ

Home add -Advt

Related Articles

Back to top button