Kannada NewsKarnataka NewsLatest

*ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಬಾತ್ ರೂಂ ನಲ್ಲಿ ಮೊಬೈಲ್ ಇಟ್ಟು ಸಿಕ್ಕಿಬಿದ್ದ ಯುವಕ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಯುವಕನೊಬ್ಬ ಮೊಬೈಲ್ ಇಟ್ಟು ಸಿಕ್ಕಿ ಬಿದ್ದಿರುವ ಘಟನೆ ಮಂಗಳೂರು ನಗರದ ಹೊರವಲಯದ ಮುಲ್ಕಿಯ ಪಕ್ಷಿಕರೆ ಎಂಬಲ್ಲಿ ನಡೆದಿದೆ.

Home add -Advt

ಸುಮಂತ್ ಪೂಜಾರಿ (22) ಮೊಬೈಲ್ ಇಟ್ಟು ಸಿಕ್ಕಿ ಬಿದ್ದ ಯುವಕ. ಯುವತಿಯ ಸ್ನಾನದ ದೃಶ್ಯ ಸೆರೆಹಿಡಿಯಲು ಬಾತ್ ರೂಮ್ ನಲ್ಲಿ ಮೊಬೈಲ್ ಇಟ್ಟಿದ್ದ. ಆದರೆ ಯುವತಿ ಬದಲಾಗಿ ಯುವತಿಯ ಅಣ್ಣ ಸ್ನಾನಕ್ಕೆ ಹೋಗಿದ್ದು, ಈ ವೇಳೆ ಬಾತ್ ರೂಮ್ ನಲ್ಲಿ ಮೊಬೈಲ್ ಇರುವುದು ಗೊತ್ತಾಗಿದೆ. ರೆಡ್ ಹ್ಯಾಂಡ್ ಆಗಿ ಆರೋಪಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

ಯುವಕ ಸುಮಂತ್ ಕೆಲ ಸಂಘಟನೆಗಳಲ್ಲಿಯೂ ಗುರುತಿಸಿಕೊಂಡಿದ್ದ. ಇದೀಗ ಆತನೇ ಬಚ್ಚಲು ಮನೆಯಲ್ಲಿ ಮೊಬೈಲ್ ಇಟ್ಟು ಯುವತಿಯ ಸ್ನಾನದ ದೃಶ್ಯ ಸೆರೆಹಿಡಿಯಲು ಮುಂದಾಗಿದ್ದಾನೆ. ಯುವಕನ ವಿರುದ್ಧ ಯುವತಿಯ ಅಣ್ಣ ಪ್ರಜ್ವಲ್ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.


Related Articles

Back to top button