
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜೇಶ್ವರಿ ಎಸ್ ಹೆಗಡೆ ಮತ್ತು ರಾಣಿ ಪ್ರಶಾಂತ ಭಾಗವಾಡಮಠ ಇವರ ಕೃತಿಗಳ ಲೋಕಾರ್ಪಣೆ ಸಮಾರಂಭ ನ.24 ರಂದು ನಡೆಯಿತು.

ನಾಲ್ಕು ಕೃತಿಗಳ ಲೋಕಾರ್ಪಣೆ ಸಮಾರಂಭ ಬೆಳಗಾವಿಯ ಕನ್ನಡ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾದೇಶಿಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಬಿ.ಜಿ.ನಾಯಕ ನೆರವೇರಿಸಿದರು.
ವೇದಿಕೆ ಮೇಲೆ ಆಸೀನರಾದ ಎಲ್ಲ ಗಣ್ಯ ವ್ಯಕ್ತಿಗಳು ದೀಪ ಪ್ರಜ್ವಲನೆ ಮಾಡಿದರು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎಸ್. ಶಾಸ್ತ್ರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಕೃತಿಗಳ ಕುರಿತು ಮಾತನಾಡಿದರು.
ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮೊಂಟೆಸರಿ ಪ್ರೀ ಸ್ಕೂಲ್ ಹಾಗೂ ಸಾಹಿತಿಗಳಾದ ರಾಣಿ ಪ್ರಶಾಂತ ಭಾಗವಾಡಮಠ ಇವರ “ಬದುಕೆಂಬುದು ಒಂದು ನಾಟಕ ” ಕೃತಿಯನ್ನು ನಿವೃತ್ತ ಡಿಡಿಪಿಐ ಎ.ಎಸ್. ರಾಮಚಂದ್ರರಾವ್ ಅವರು ಕನ್ನಡ ಸಾರಸ್ವತ ಲೋಕಕ್ಕೆ ಈ ಕೃತಿಯ ಲೋಕಾರ್ಪಣೆ ಗೊಳಿಸಿ ಕೃತಿ ಕುರಿತು ತಮ್ಮ ಅನಿಸಿಕೆ ನುಡಿದರು.
ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಭಾರತಿ ರಾಜೀವ ಮಠ ಅವರು ಕೃತಿ ಪರಿಚಯ ಮಾಡಿದರು. ನಿವೃತ್ತ ಅಧೀಕ್ಷಕರು ಹಾಗೂ ಸಾಹಿತಿಗಳಾದ ರಾಜೇಶ್ವರಿ ಎಸ್. ಹೆಗಡೆ
ಅವರ “ಮೊದಲ ಹೆಜ್ಜೆ ಕವನ ಸಂಕಲನ ” ಕೃತಿಯನ್ನು ಡಾ.ಸರಜೂ ಕಾಟ್ಕರ್ ಅವರು ಬಿಡುಗಡೆ ಮಾಡಿ ಕೃತಿ ಕುರಿತು ತಮ್ಮ ಅನಿಸಿಕೆ ನುಡಿದರು.
ಮೊದಲ ಹೆಜ್ಜೆ ಕೃತಿಯನ್ನು ಡಾ, ಹೇಮಾವತಿ ಸೋನೊಳಿ ಸಾಹಿತಿಗಳು ಬೆಳಗಾವಿ ಇವರು ಪರಿಚಯಿಸಿದರು. ಇನ್ನೊಂದು ಕೃತಿ ” ಹನಿ ಹನಿ ಗೊಂಚಲು ಹನಿಗವನ ಸಂಕಲನವನ್ನು ಎಲ್.ಎಸ್.ಶಾಸ್ತ್ರಿ ಲೋಕಾರ್ಪಣೆಗೊಳಿಸಿದರು.
ಈ ಹನಿಗವನ ಸಂಕಲನದ ಕೃತಿಯನ್ನು ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಜಿ.ಆರ್.ಕೆಂಚರಡ್ಡೇರ ಇವರು ಕೃತಿಗಳ ಕುರಿತು ಮಾತನಾಡಿದರು. ಗೌರವ ಅತಿಥಿಗಳಾಗಿ ಆಗಮಿಸಿದ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಮ್ಮ ಆತಿಥೇಯ ನುಡಿ ನುಡಿದರು.
ಜಿ ಎಚ್ ವೀರಣ್ಣ, ನಿವೃತ್ತ ಜಂಟಿ ನಿರ್ದೇಶಕರು ಮಾತನಾಡಿದರು.ಸಾಹಿತಿ ಯ.ರು.ಪಾಟೀಲ ಆತಿಥೇಯ ಭಾಷಣ ಮಾಡಿದರು. ಕೃತಿಕಾರರಾದ ರಾಣಿ ಪ್ರಶಾಂತ ಭಾಗವಾಡಮಠ ಮತ್ತು ರಾಜೇಶ್ವರಿ ಎಸ್ ಹೆಗಡೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಲೇಖಕಿಯರ ಸಂಘದ ಅಧ್ಯಕ್ಷರಾದ ಸುಮಾ ಕಿತ್ತೂರು ಸ್ವಾಗತ ಭಾಷಣ ಮಾಡಿದರು. ಬಸವರಾಜ ಗಾರ್ಗಿ ನಿರೂಪಣೆ ಮಾಡಿದರು. ಲೇಖಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಆಶಾ ಯಮಕನಮರಡಿ ಗಣ್ಯರ ಪರಿಚಯ ಮಾಡಿದರು.
ಆರ್. ಬಿ.ಬನಶಂಕರಿ ನಿವೃತ್ತ ಡಿ.ಡಿ.ಪಿ.ಆಯ್ ಪರಿಚಯ ಮಾಡಿದರು. ಆಶಾ ಯಮಕನಮರಡಿ ಇವರು ನಾಡಗೀತೆ ಹಾಡಿದರು. ವೇದಿಕೆಯಲ್ಲಿ ಬೆಳಗಾವಿ ಜಿಲ್ಲೆ ಹಿರಿಯ ಸಾಹಿತಿಗಳಾದ ಡಾ. ಸರಜೂ ಕಾಟ್ಕರ್, ಡಾ. ಬಸವರಾಜ ಜಗಜಂಪಿ, ಎಲ್ ಎಸ್ ಶಾಸ್ತ್ರಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.




