ಪ್ರಗತಿವಾಹಿನಿ ಸುದ್ದಿ; ಶ್ರೀನಗರ: ಪುಲ್ವಾಮಾ ದಾಳಿ ನಡೆದು ಒಂದು ವರ್ಷದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಉಗ್ರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ತಂದೆ ಮತ್ತು ಮಗಳನ್ನು ಬಂಧಿಸಿದೆ.
ಪುಲ್ವಾಮಾ ದಾಳಿ ಉಗ್ರರಿಗೆ ಆಶ್ರಯ ನೀಡಿ ಬಾಂಬ್ ತಯಾರಿಸಲು ಸಹಾಯ ಮಾಡಿದ್ದ ಆರೋಪದ ಮೇಲೆ ನಾಲ್ಕು ದಿನಗಳ ಹಿಂದೆ ಪುಲ್ವಾಮಾ ಹಜಿಬಲ್ ಪ್ರದೇಶ ಮೂಲದ ಪೀರ್ ತಾರೀಕ್ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳು ಇಂಶಾಳನ್ನೂ ಬಂಧಿಸಾಲಾಗಿದೆ.
ಆತ್ಮಾಹುತಿ ದಳದ ಮುಖ್ಯಸ್ಥ ಅದಿಲ್ ಅಮಹ್ಮದ್ ದಾರ್ನಿಗೆ ಇವರಿಬ್ಬರೂ ಆಶ್ರಯ ನೀಡಿದ್ದರು. ಹಲವು ಬಾರಿ ಬಂದೂಕು, ಮದ್ದು ಗುಂಡು, ಹಣ ಮತ್ತಿತರ ಸ್ಫೋಟಕ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಅವುಗಳನ್ನು ಪುಲ್ವಾಮಾ ದಾಳಿಗೆ ಬಳಸಲಾಗಿತ್ತು ಎಂದು ವಿಚಾರಣೆ ವೇಳೆ ಪೀರ್ ತಾರೀಕ್ ಬಾಯಿ ಬಿಟ್ಟಿದ್ದ.
ಬಾಂಬ್ ತಯಾರಿಗೆ ಬೇಕಾದ ಕೈಗವಸು, ಬ್ಯಾಟರಿ ಮತ್ತು ಅಮೋನಿಯಮ್ ಪುಡಿಯನ್ನು ಅಮೆಜಾನ್ನಿಂದ ಖರೀದಿಸಿದ್ದರು. ಈ ವಸ್ತುಗಳ ಬಳಕೆಯಾಗಿದೆ ಎಂದು ಪ್ರಯೋಗಾಲದಿಂದ ಬಂದ ವರದಿಗಳು ಸಾಬೀತುಪಡಿಸಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
2019 ಫೆ.14ರಂದು ಸಿಆರ್ಪಿಎಫ್ ಯೋಧರ ಮೇಲೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಸೇನೆ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ