ಪುಣಾ-ಬೆಂಗಳೂರು ಹೆದ್ದಾರಿ ಸಂಚಾರ ಆರಂಭ
ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ –
ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತವಾಗಿದ್ದ ಪುಣೆ-ಬೆಂಗಳೂರು ರಸ್ತೆ ಸಂಚಾರ ಸೋಮವಾರ ಪುನಾರಂಭವಾಗಿದೆ. ಬೆಳಗಾವಿ -ಕೊಲ್ಲಾಪುರ ಮಧ್ಯೆ ಸಂಚಾರ ಸ್ಥಗಿತವಾಗಿತ್ತು.
ಸೋಮವಾರ ಬೆಳಗ್ಗೆ ಏಕಮುಖ ಸಂಚಾರಕ್ಕೆ ತೆರವುಗೊಳಿಸಿ, ಮಧ್ಯಾಹ್ನ ನಂತರ ದ್ವಿಮುಖ ಸಂಚಾರ ಆರಂಭಿಸಲಾಯಿತು. ಮೊದಲು ಇಂಧನ ತುಂಬಿದ ವಾಹನಗಳನ್ನು ಬಿಡಲಾಯಿತು. ಸಂಚಾರ ದಟ್ಟಣೆ ತಡೆಯಲು ಹೆದ್ದಾರಿ ಮೇಲಿನ ಟೋಲ್ ಸಂಗ್ರಹ ನಿಲ್ಲಿಸಲಾಗಿದೆ.
ಇಂಧನದ ವಾಹನಗಳು ಬರುತ್ತಿದ್ದಂತೆ ಕೊಲ್ಹಾಪುರದ ಪೆಟ್ರೋಲ್ ಬಂಕ್ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವಾಹನಗಳು ಸಾಲುಗಟ್ಟಿದವು. ಒಂದು ವಾರದಿಂದ ಇಂಧನ ಸೇರಿದಂತೆ ಯಾವುದೇ ವಾಹನಗಳು ನಗರಕ್ಕೆ ಸಂಚರಿಸದಂತೆ ಕೊಲ್ಲಾಪುರ ದ್ವೀಪದಂತಾಗಿತ್ತು.
ಸೋಮವಾರ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಸಾರಿಗೆ ಸಂಸ್ಥೆಯ ಬಸ್ ಗಳೂ ಸಂಚಾರ ಆರಂಭಿಸಿದ್ದು, ಬಸ್ ನಿಲ್ದಾಣದಲ್ಲಿ ಜನರು ತುಂಬಿದ್ದರು. ಶಿರೋಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಉಳಿದಂತೆ ಎಲ್ಲೆಡೆ ಪ್ರವಾಹ ಕಡಿಮೆಯಾಗುತ್ತಿದೆ. ಜಿಲ್ಲೆಯ 33 ರಸ್ತೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಮಂಗಳವಾರ ಸಂಚಾರ ಸಂಪೂರ್ಣ ಸುಗಮವಾಗುವ ನಿರೀಕ್ಷೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ