
ಪ್ರಗತಿವಾಹಿನಿ ಸುದ್ದಿ; ಹನೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳಿ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕು ಮರೂರಿನ ಮುನಿಯಪ್ಪ (29)ಮೃತ ಅಭಿಮಾನಿ. ಮುನಿಯಪ್ಪ ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಪುನೀತ್ ಸಾವಿನ ಸುದ್ದಿ ಕೇಳುತ್ತಲೇ ಕುಸಿದುಬಿದ್ದ ಮುನಿಯಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತು. ಆದರೆ ಮಾರ್ಗಮದ್ಯೆ ಕೊನೆಯುಸಿರೆಳೆದಿದ್ದಾರೆ.
ಮುನಿಯಪ್ಪ ಚಿಕ್ಕಂದಿನಿಂದಲೇ ಪುನೀತ್ ಅವರ ಚಿತ್ರವನ್ನು ವೀಕ್ಷಿಸುತ್ತಿದ್ದು, ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದರು. ಪುನೀತ್ ನಿಧನ ಸುದ್ದಿ ಕೇಳುತ್ತಿದ್ದಂತೆ ಶಾಕ್ ಆಗಿ ಕುಸಿದು ಬಿದ್ದ ಮುನಿಯಪ್ಪ ವಿಧಿವಶರಾಗಿದ್ದಾರೆ.
ವಿಧಿಯ ಕ್ರೂರ ತಿರುವು…; ಪುನೀತ್ ನಿಧನಕ್ಕೆ ಪ್ರಧಾನಿ ಕಂಬನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ