ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಬೆಳಗಾವಿ ಹಿರಿಯ ನಾಗರಿಕರ ವೇದಿಕೆಯ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ನಡೆಯಿತು. ರತ್ನಪ್ರಭಾ ಬೆಲ್ಲದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಭಾರತಿ ವಡವಿ, ಸರಳಾ ಹೇರೆಕರ, ಜಯಶ್ರೀ ನಿರಾಕರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ರಾಜನಂದಾ ಗಾರಗಿ, ಖಜಾಂಚಿಯಾಗಿ ಅಕ್ಕಮಹಾದೇವಿ ತೆಗ್ಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಾಂತಾ ಸಬರದ ಹಾಗೂ ಶೋಭಾ ತೋರಗಲ್ಲ, ವಿಜಯಾ ಉಳ್ಳಾಗಡ್ಡಿ, ಶೋಭಾ ನೀಲಗೌಡ, ಪ್ರತಿಮಾ ಕಂಗೂರಿ, ಹೀರಾ ಚೌಗುಲೆ, ಅನ್ನಪೂರ್ಣ ಜಕಾತಿಮಠ, ಶಾರದಾ ಹಿರೇಮಠ, ಜ್ಯೋತಿ ಬದಾಮಿ, ರಂಜನಾ ಪಾಟೀಲ, ಶಾಂತಾ ಮಸೂತಿ, ದ್ರಾಕ್ಷಾಯಣಿ ಮಲ್ಲಾಪೂರ, ಪ್ರೇಮಾ ಪಾನಶೆಟ್ಟಿ, ಶಾಂತಾ ಹೆಗಡೆ, ಲಲಿತಾ ಹಿರೇಮಠ, ಕುಂದಾ ಕೋಕಟನೂರ, ಮಾಯಾ ರಫೂರಿ, ಅರ್ಚನಾ ಜೋಶಿ, ಮಹಾನಂದ ಪಾನಶೆಟ್ಟಿ, ಅನ್ನಪೂರ್ಣ ಅಗಡಿ ಪದಾಧಿಕಾರಿಗಳಾಗಿ ಆಯ್ಕೆಯಾದರು.
ಹಿರಿಯ ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಅಡಿವೆಪ್ಪ ಬೆಂಡಿಗೇರಿ ಉಪಸ್ಥಿತರಿದ್ದರು. ರಾಜ್ಯ ಕಾರ್ಯದರ್ಶಿ ಮಲ್ಲಪ್ಪ ಮುದಕವಿ ಸಂಘದ ಮಾಹಿತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಆನಂದ ಕರ್ಕಿ ಸ್ವಾಗತಿಸಿದರು.