Latest

ಪುನೀತ ಪರ್ವ ನೋಡುತ್ತಿದ್ದಾಗಲೇ ಹೃದಯಾಘಾತ; ಅಪ್ಪು ಅಭಿಮಾನಿ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿರುವ ನೋವು ಮಾಸುವ ಮುನ್ನವ್ವೇ ಇದೀಗ ’ಪುನೀತ ಪರ್ವ’ ಕಾರ್ಯಕಮ ನೋಡುತ್ತಿದ್ದಾಗಲೇ ಅಪ್ಪು ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಲ್ಲೇಶ್ವರಂನ ಲಿಂಕ್ ರಸ್ತೆಯಲ್ಲಿನ ನಿವಾಸದಲ್ಲಿ ನಿನ್ನೆ ರಾತ್ರಿ ಪುನೀತ ಪರ್ಯ ಕಾರ್ಯಕ್ರಮದ ನೇರ ಪ್ರಸಾರವನ್ನು ಕುಟುಂಬದ ಜೊತೆ ಕುಳಿತು ವೀಕ್ಷಿಸುತ್ತಿದ್ದ ಅಪ್ಪು ಅಭಿಮಾನಿ ಗಿರಿರಾಜ್ ತುಂಬಾ ಬಾವುಕರಾಗಿ ಕಣ್ಣೀರುಡುತ್ತಿದ್ದರಂತೆ. ಎಂಥ ಮನುಷ್ಯ ಸತ್ತುಹೋದ, ಸಣ್ಣ ವಯಸ್ಸಿನಲ್ಲೇ ಅಪ್ಪು ಕಳೆದುಕೊಂಡು ಬಿಟ್ಟೆವು ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ಮನೆಯವರು ಗಿರಿರಾಜ್ ಗೆ ಸಮಾಧಾನ ಮಾಡುತ್ತಿದ್ದರಂತೆ.

ಪುನೀತ ಪರ್ವ ಕಾರ್ಯಕ್ರಮದ ಮಧ್ಯೆಯೇ ಶೌಚಾಲಯಕ್ಕೆ ತೆರಳಿದ್ದ ಗಿರಿರಾಜ್ ಶೌಚಾಲಯದಲ್ಲಿಯೇ ಕುಸಿದು ಬಿದ್ದಿದ್ದಾರೆ. ಇದೀಗ ಗಿರಿರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಗಿರಿರಾಜ್, ಪುನೀತ್ ಅವರೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದರಂತೆ. ಮನೆಯಲ್ಲಿಯೂ ಪುನೀತ್ ಭಾವಚಿತ್ರಕ್ಕೆ ಮುತ್ತಿನ ಹಾರ ಹಾಕಿ ಅಭಿಮಾನದಿಂದ ಪೂಜಿಸುತ್ತಿದ್ದರಂತೆ. ಪುನೀತ್ ಬೆನ್ನಲ್ಲೇ ಅವರ ಅಭಿಮಾನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವುದು ಆಘಾತಕ್ಕೆ ಕಾರಣವಾಗಿದೆ.

Home add -Advt

RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ

https://pragati.taskdun.com/latest/lokayukta-raidrto-checkpostchikkaballapura/

Related Articles

Back to top button