Latest

ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; ಬೆಂಕಿ ನಂದಿಸಿ ವಾಪಸ್ ಆಗುತ್ತಿದ್ದ ವೇಳೆ ಅಗ್ನಿಶಾಮಕ ಅಧಿಕಾರಿ ಸಾವು

ಪ್ರಗತಿವಾಹಿನಿ ಸುದ್ದಿ; ಪುಣೆ: ಪುಣೆಯ ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭಸಿದ್ದು, ಬೆಂಕಿ ನಂದಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಕರ್ತವ್ಯನಿರತ ಅಗ್ನಿಶಾಮಕ ಅಧಿಕಾರಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಅಧಿಕಾರಿಯನ್ನು ಪ್ರಕಾಶ್ ಹಸ್ಬೆ ಎಂದು ಗುರುತಿಸಲಾಗಿದೆ. ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೇಯಲ್ಲಿ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡವನ್ನು ಅಗ್ನಿಶಾಮಕ ಸಿಬ್ಬಂದಿಗಳು ನಂದಿಸಿದ್ದರು 16 ಅಗ್ನಿಶಾಮಕ ವಾಹನಗಳು ಸತತ ಮೂರು ಗಂಟೆ ಕಾಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಮಾರುಕಟ್ಟೆಯಲ್ಲಿನ ಸುಮಾರು 800 ಅಂಗಡಿಗಳು ಸುಟ್ತು ಕರಕಲಾಗಿವೆ.

Home add -Advt

ಕಾರ್ಯಾಚರಣೆ ಮುಗಿದ ಬಳಿಕ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಪ್ರಕಾಶ್ ಹಸ್ಬೆಗೆ ಅಪಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಲೇಡಿ ಸಿಂಗಂ ಖ್ಯಾತಿಯ ಅರಣ್ಯಾಧಿಕಾರಿ ಆತ್ಮಹತ್ಯೆ

Related Articles

Back to top button