Latest

ಸಿಡಿ ಲೇಡಿ ಇರುವ ಜಾಗ ಪತ್ತೆ ಹಚ್ಚಿದ ಎಸ್ಐಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಎಲ್ಲಿದ್ದಾಳೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಎಸ್ ಐಟಿ ಅಧಿಕಾರಿಗಳು ಕಲೆ ಹಾಕಿದ್ದಾರೆ. ಸಿಡಿ ಯುವತಿ ಬೆಂಗಳೂರಿನಲ್ಲಿಯೇ ಇದ್ದಾಳೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಸಿಡಿ ಲೇಡಿ ಇದುವರೆಗೂ ನಾಲ್ಕು ವಿಡಿಯೋ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಆಕೆ ಯಾವ ಜಾಗದಲ್ಲಿದ್ದಾಳೆ ಎಂಬುದು ತನಿಖಾಧಿಕಾರಿಗಳ ತಲೆನೋಆಗಿತ್ತು. ಇದೀಗ ಸಿಡಿ ಯುವತಿ ಜಾಡು ಪತ್ತೆಯಾಗಿದ್ದು, ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಉದ್ಯಮಿ ಶಿವಕುಮಾರ್ ಎಂಬುವವರ ಕಾರು ಚಾಲಕ ಪರಶಿವಮೂರ್ತಿ ಎಂಬುವವರ ಜೊತೆ ಇದ್ದಾಳೆ ಎಂದು ತಿಳಿದುಬಂದಿದೆ.

Home add -Advt

ಇನ್ನುಳಿದ ಪ್ರಮುಖ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಉತ್ತರ ಭಾರದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಯುವತಿ ಪೋಷಕರು ಈಗಾಗಲೇ ಎಸ್ ಐಟಿ ತಾಂತ್ರಿಕ ವಿಭಾಗದ ಮುಂದೆ ಹಾಜರಾಗಿದ್ದು, ಇಂದು ಸಂಜೆ ಅಥವಾ ನಾಳೆ ಯುವತಿ ಕೂಡ ಎಸ್ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ.

ಸರಣಿ ಧಾರಾವಾಹಿ ರೂಪದಲ್ಲಿ ಬಿಡುಗಡೆ ಆಗುತ್ತಿರುವ ಆಡಿಯೋ-ವಿಡಿಯೋಗಳ ಬಗ್ಗೆ ವೈಜ್ಞಾನಿಕ ತನಿಖೆ: ಬಸವರಾಜ ಬೊಮ್ಮಾಯಿ

ರಮೇಶ್ ಜಾರಕಿಹೊಳಿಗೆ ಟ್ರ್ಯಾಕ್ ಹಾಕಿದ್ದು ನಿಜ: ಡಿ.ಕೆ.ಶಿವಕುಮಾರ್

Related Articles

Back to top button