Kannada NewsKarnataka NewsLatest

ಪಂಜಾಬ್ ಸರ್ಕಾರ ಭಾರತದ ಘನತೆಗೆ ಕಳಂಕ ತಂದಿದೆ – ಗುರು ಮೆಟಗುಡ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯಲ್ಲಿ ಲೋಪ ಉಂಟಾಗಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮಾಂತರ, ಮಹಾನಗರಜಿಲ್ಲೆ ಹಾಗೂ ಮಂಡಳ ಬಿಜೆಪಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್,  ದೇಶದ ಪ್ರಧಾನಮಂತ್ರಿ ಒಂದು ರಾಜ್ಯದ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ಕೊಡುವುದರ ಜೊತೆಗೆ ಕಾರ್ಯಕ್ರಮದ ಉದ್ಘಾಟನೆಗೆ ಹೋಗುವ ದಾರಿಯಲ್ಲಿ ೨೦ ನಿಮಿಷ ಭದ್ರತಾ ವ್ಯವಸ್ಥೆಯನ್ನು ಗಾಳಿಗೆ ತೂರಿ ಭದ್ರತೆಯಲ್ಲಿ ಲೋಪ ಎಸಗಿ ಪ್ರಧಾನಮಂತ್ರಿಗಳ ರಕ್ಷಣಾ ವ್ಯವಸ್ಥೆಯಲ್ಲಿ ಭಯವನ್ನುಂಟು ಮಾಡುವ ಪಂಜಾಬ್ ಸರ್ಕಾರ ಭಾರತದ ಘನತೆಗೆ ಕಳಂಕ ತಂದಿದೆ ಎಂದರು.

ಅಲ್ಲಿಯ ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಅಧಿನಾಯಕರು ಈ ಬಗ್ಗೆ ಚಕಾರ ಎತ್ತಲಾರದೆ ಇರುವುದು ಅವರ ಮನಸ್ಥಿತಿಯನ್ನು ತಿಳಿಸುತ್ತದೆ. ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ಸಿಗರಿಗೆ ದೇಶದ ಪ್ರಧಾನ ಮಂತ್ರಿಗಳ ಭದ್ರತೆಗೆ ಭಯ ತಂದೊಡ್ಡಿ ಭಾರತದ ಅಂತರಿಕ ಭದ್ರತೆಯ ವ್ಯವಸ್ಥೆಗೆ ಧಕ್ಕೆ ತಂದಿದೆ. ದೇಶದ ಜನತೆಯ ಪರವಾಗಿ ಹಗಲಿರುಳು ಸೇವೆ ಮಾಡುವ ಪ್ರಧಾನಮಂತ್ರಿಗಳಿಗೆ ಅಸಡ್ಡೆ ತೋರಿರುವ ಪಂಜಾಬ ಪೊಲೀಸ್ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರಧಾನಮಂತ್ರಿಗಳ ಸಂಚಾರದ ರಸ್ತೆಗಳ ಬಗ್ಗೆ ಕನಿಷ್ಠ ಜ್ಞಾನವಿಲ್ಲದೆ ಪ್ರಧಾನಮಂತ್ರಿಗಳ ರಕ್ಷಣಾ ವ್ಯವಸ್ಥೆಗಳಿಗೆ ತಪ್ಪು ಮಾಹಿತಿಗಳು ನೀಡುವ ಮೂಲಕ ಘೋರ ಅಪರಾಧ ಮಾಡುವುದಲ್ಲದೆ ಅಪರಾಧದಿಂದ ನುಣುಚಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿರುವ ಪಂಜಾಬ್ ರಾಜ್ಯದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಪಂಜಾಬ ರಾಜ್ಯ ಸರಕಾರದಲ್ಲಿರುವ ಅಧಿಕಾರಿಗಳನ್ನು ಬಂಧಿಸಿ ಅವರನ್ನು ತನಿಖೆಗೆ ಒಳಪಡಿಸಬೇಕು. ಕ್ಷುದ್ರ ಮನಸ್ಸಿನ ಇಂತಹ ಸರ್ಕಾರವನ್ನು ಕಿತ್ತೊಗೆದು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ಘಟನೆ ಮರಕಳಿಸದಂತೆ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಗುರು ಮೆಟಗುಡ್ ರಾಷ್ಟ್ರಪತಿಗಳಲ್ಲಿ ವಿನಂತಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಹಾಗೂ ಉನ್ನತ ಶ್ರೇಣ ಯ ರಕ್ಷಣೆಯಲ್ಲಿರುವ ಹಾಗೂ ಅನೇಕ ವಿರೋಧ ದೇಶಗಳ ಮತ್ತು ದೇಶದ ಆಂತರಿಕ ವಿದ್ರೋಹಿಗಳ ಕಣ್ಣಲ್ಲಿ ಗುರಿಯಾಗಿರುವ ದೇಶಭಕ್ತ ಭಾರತವನ್ನು ಜಗದ್ವಿಖ್ಯಾತ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ದೇಶದ ಪ್ರಧಾನ ಮಂತ್ರಿಗಳ ರಕ್ಷಣಾ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ತೋರಿಸಿರುವ ಪಂಜಾಬ್ ಸರ್ಕಾರ ಈ ಘಟನೆಯ ಹೊಣೆಹೊತ್ತು ತಕ್ಷಣ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಸರಕಾರವನ್ನು ವಿಸರ್ಜನೆ ಗೊಳಿಸಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ, ಭಾರತ ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ರಾಜ್ಯಗಳ ಒಕ್ಕೂಟ ವ್ಯವಸ್ಥೆ ಹೊಂದಿದ ಗಣರಾಜ್ಯವಾಗಿದೆ. ಪಂಜಾಬ ರಾಜ್ಯವನ್ನು ತಾಲಿಬಾನ್ ಮಾಡಲಿಕ್ಕೆ ಹೊರಟಿರುವ ಕಾಂಗ್ರೆಸ್ ನೇತೃತ್ವದ ಪಂಜಾಬ ಸರ್ಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಅಡಳಿತ ಜಾರಿಗೆ ತರುವಂತೆ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದರು.

ಈ ದೇಶದ ಸಮಸ್ತ ಜನತೆಯ ಪ್ರತೀಕವಾಗಿರುವ ದೇಶದ ಪ್ರಧಾನಿಗಳಿಗೆ ಕಾಂಗ್ರೆಸ್ ಅಡಳಿತವಿರುವ ಪಂಜಾಬ ರಾಜ್ಯದಲ್ಲಿ ಭದ್ರತಾ ಲೊಪವಾಗಿರುವದನ್ನು ದೇಶದ ಪ್ರಜೆಗಳು ಒಟ್ಟಾಗಿ ಉಗ್ರವಾಗಿ ಖಂಡಿಸುತ್ತೇವೆ. ಉಗ್ರ ಸಂಘಟನೆಗಳ ಹಾವಳಿಯಿಂದ ತುತ್ತಾದ ಪ್ರದೇಶಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣಾ ವ್ಯವಸ್ಥೆಗೆ ತೊಂದರೆಯಾಗಿಲ್ಲ. ಆದರೆ ಕಾಂಗ್ರೆಸ್ ಆಡಳಿತದ ಪಂಜಾಬ ರಾಜ್ಯದಲ್ಲಿ ಆಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿಯಾಗಿದೆ. ಇಂತಹ ದುಸ್ಸಾಹಸಕ್ಕೆ ಕೈಹಾಕಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರವನ್ನು ತಕ್ಷಣ ಕಿತ್ತುಹಾಕಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ರಾಷ್ಟ್ರದ ಪ್ರಜೆಗಳ ಪರವಾಗಿ ಬಿಜೆಪಿ ಪದಾಧಿಕಾರಿಗಳು ರಾಷ್ಟ್ರಪತಿಗಳಲ್ಲಿ ವಿನಂತಿಸುತ್ತೇವೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷೆ ರೇಖಾ ಚಿನ್ನಾಕಟ್ಟಿ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ ಮಾತನಾಡಿ, ಭಾರತ ದೇಶದಲ್ಲಿ ಎಂದು ನಡೆಯಲಾರದ ಘಟನೆ ಪಂಜಾಬದಲ್ಲಿ ನಡೆದಿರುವುದು ಭಾರತ ದೇಶದ ಘನತೆಗೆ ಕಳಂಕ ತಂದಿದೆ ಭಾರತ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಮಾಡಲಿಕ್ಕೆ ಹೊರಟಿರುವ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು ತಕ್ಷಣ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಹಾಗೂ ಉನ್ನತ ಶ್ರೇಣ ಯ ರಕ್ಷಣೆಯಲ್ಲಿರುವ ಹಾಗೂ ಅನೇಕ ವಿರೋಧ ದೇಶಗಳ ಮತ್ತು ದೇಶದ ಆಂತರಿಕ ವಿದ್ರೋಹಿಗಳ ಕಣ್ಣಲ್ಲಿ ಗುರಿಯಾಗಿರುವ ದೇಶಭಕ್ತ ಭಾರತವನ್ನು ಜಗದ್ವಿಖ್ಯಾತ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ದೇಶದ ಪ್ರಧಾನ ಮಂತ್ರಿಗಳ ರಕ್ಷಣಾ ವ್ಯವಸ್ಥೆಯಲ್ಲಿ ಬೇಜವಾಬ್ದಾರಿತನ ತೋರಿಸಿರುವ ಪಂಜಾಬ್ ಸರ್ಕಾರ ಈ ಘಟನೆಯ ಹೊಣೆಹೊತ್ತು ತಕ್ಷಣ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ ಸರಕಾರವನ್ನು ವಿಸರ್ಜನೆ ಗೊಳಿಸಬೇಕು. ಒಂದು ವೇಳೆ ಈ ಕ್ರಮಕ್ಕೆ ಮುಂದಾಗದಿದ್ದರೆ ತಕ್ಷಣ ರಾಷ್ಟ್ರಪತಿಗಳು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡು ತಕ್ಷಣ ಪಂಜಾಬ್ ಸರ್ಕಾರವನ್ನು ಕಿತ್ತುಹಾಕಿ ಪ್ರಜಾಪ್ರಭುತ್ವವನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಯುವರಾಜ ಜಾಧವ, ಧನಂಜಯ ಜಾಧವ, ರತ್ನಾ ಗೋಧಿ, ರಾಜೇಂದ್ರ ಗೌಡಪ್ಪಗೋಳ, ಡಾ. ಬಸವರಾಜ ಪರವನ್ನವರ, ರಾಜೇಶ ಬಿಳಗಿ, ಮಡಿವಾಳಪ್ಪ ಚಳಕೊಪ್ಪ, ಗುರು ಮೆಟಗುಡ್, ಶಂಕರ ಹುರಕಡ್ಲಿ, ವೀರಭದ್ರಯ್ಯ ಪೂಜಾರ, ಮುತ್ತೆಪ್ಪ ಮನ್ನಾಪ್ಪುರ, ಸಾವಿತ್ರಿ ಹೊನ್ನನ್ನವರ, ಜೀತೆಂದ್ರ ಮಾದರ, ಬಸವರಾಜ ನೇಸರಗಿ, ಸುನೀಲ ಮಡ್ಡಿಮನಿ, ಬಿ.ಎಫ್.ಕೊಳದೂರ, ಉಮೇಶ ಹಕಾಟಿ, ಮಲ್ಲಿಕಾರ್ಜುನ ದೇಸಾಯಿ, ಲಕ್ಕಪ್ಪ ಕಾರ್ಗಿ, ಮುಂತಾದವರು ಇದ್ದರು

ರಾಜ್ಯಾದ್ಯಂತ ಶಾಲೆಗಳು ಬಂದ್ ಸಾಧ್ಯತೆ : ಶಿಕ್ಷಣ ಇಲಾಖೆಯಿಂದ ಆಗಲೇ ಸಿದ್ಧತೆ; ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ರವಾನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button