National

*ಕೋರ್ಟ್ ನಲ್ಲಿಯೇ ಅಳಿಯನನ್ನು ಗುಂಡಿಟ್ಟು ಹತ್ಯೆಗೈದ ಮಾಜಿ ಎಐಜಿ*

ಪ್ರಗತಿವಾಹಿನಿ ಸುದ್ದಿ: ಐಆರ್ ಎಸ್ ಅಧಿಕಾರಿ ಅಳಿಯನನ್ನು ಮಾವ ಮಾಜಿ ಎಐಜಿ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಂಜಾಬ್ ನ ಚಂಡೀಗಢ ಕೋರ್ಟ್ ನಲ್ಲಿ ನಡೆದಿದೆ.

ಮಾಜಿ ಎಐಜಿ ಅಲ್ವಿಂದರ್ ಸಿಂಗ್ ಸಿಧು, ಐಆರ್ ಎಸ್ ಅಧಿಕಾರಿಯಾಗಿದ್ದ ತನ್ನ ಅಳಿಯನನ್ನು ಚಂಡೀಗಢ ಜಿಲ್ಲಾ ಕೋರ್ಟ್ ಆವರಣದಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಎರಡು ಕುಟುಂಬಗಳ ನಡುವಿನ ಕಲಹವೇ ಘಟನೆಗೆ ಕಾರಣ ಎನ್ನಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಇಂದು ಚಂಡೀಗಢ ಜಿಲ್ಲಾ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಮಲ್ವಿಂದರ್ ಸಿಂಗ್ ಕೃಷಿ ಇಲಖೆಯಲ್ಲಿ ಐಆರ್ ಎಸ್ ಅಧಿಕಾರಿಯಾಗಿರುವ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿದ್ದಾರೆ. ತಕ್ಷಣ ಪೊಲೀಸರು ಹಾಗೂ ವಕೀಲರು ಆರೋಪಿ ಮಲ್ವಿಂದರ್ ಸಿಂಗ್ ನನ್ನು ಕೋರ್ಟ್ ನ ರೂಮಿಗೆ ಎಳೆದೊಯ್ದು ಕೂಡಿಹಾಕಿ ಬಂಧಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಐಆರ್ ಎಸ್ ಅಧಿಕಾರಿಯನ್ನು ಆಸ್ಪತ್ರೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button