Kannada NewsKarnataka NewsLatest

*ಬಲೆಯಲ್ಲಿ ಸಿಲುಕ್ಕಿದ್ದ‌ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಮನೆಯ ಸಮೀಪ ಬೇಲಿಗೆ ಕಟ್ಟಲಾಗಿದ್ದ ಬಲೆಯಲ್ಲಿ ಸಿಲುಕಿದ ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ತೆರಳಲು ಅವಕಾಶ ಒದಗಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿದ್ರಳ್ಳಿಯಲ್ಲಿ ನಡೆದಿದೆ.

ಬಿದ್ರಳ್ಳಿಯ ತಿಲಕ ನಾಯ್ಕ ಎನ್ನುವವರ ಮನೆಯ ಸಮೀಪ ಬೇಲಿಗೆ ಕಟ್ಟಲಾಗಿದ್ದ ಬಲೆಯಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಬಲೆಯ ಕಿಂಡಿಯಲ್ಲಿ ಸಿಲುಕಿ ಮುಂದೆ ತೆರಳಲಾದರೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ತಿಲಕ ನಾಯ್ಕ ಉಂಚಳ್ಳಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಫಾರೆಸ್ಟ್ ಗಾರ್ಡ ಮಂಜುನಾಥ ಹಾಗೂ ವಾಚರ್ ಕೋಟೆಗುಡ್ಡೆ ಮಂಜಣ್ಣ ಸ್ಥಳಕ್ಕೆ ಆಗಮಿಸಿ, ಬಲೆಯನ್ನು ತುಂಡರಿಸಿ, ಹೆಬ್ಬಾವು ಸುರಕ್ಷಿತವಾಗಿ ಹೊರಗೆ ಬಂದು ಅರಣ್ಯಕ್ಕೆ ತೆರಳಲು ಅನುವು ಮಾಡಿಕೊಟ್ಟರು.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button