Kannada NewsKarnataka NewsPolitics

*ಧರ್ಮಸ್ಥಳ ಪ್ರಕರಣದ ಮಧ್ಯಂತರ ವರದಿ ಬಿಡುಗಡೆ ಆಗಲಿ: ಆರ್ ಅಶೋಕ್ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ಸುತ್ತಮುತ್ತಲು ಶವಗಳನ್ನು ಹೂತಿಡಲಾಗಿದೆ ಎಂಬುದನ್ನು ಮಾಸ್ಕ್ ಮ್ಯಾನ್ ಆರೋಪ ಮಾಡಿರುವ ಬೆನ್ನಲ್ಲೇ ಈಗಾಗಲೇ ಶವ ಹುಡುಕಾಟ ನಡೆಸಿದ ಎಸ್ಐಟಿ ತಂಡ ಅನೇಕ ಕಡೆ ಉತ್ಖನನ ನಡೆಸಿದೆ. ಇದೀಗ ಈ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಸರ್ಕಾರ ಎಸ್‌ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಮಾಡಿದ್ದಾರೆ. 

ಪ್ರತಿದಿನ ಒಂದು ಲಕ್ಷ ಕೇಸ್ ಬರುತ್ತವೆ. ಸದನದಲ್ಲಿ ನಾವು ಗಲಾಟೆ ಮಾಡಿದರೂ ನೀವುಗಳು ಎಸ್‌ಐಟಿ ರಚನೆ ಮಾಡಲ್ಲ. ಆದರೆ ಈ ವಿಚಾರವಾಗಿ ಅಷ್ಟು ಬೇಗ ಎಸ್‌ಐಟಿ ರಚನೆ ಮಾಡಿದ್ದೀರಿ. ಕಾರಣ, ಸಿದ್ದರಾಮಯ್ಯ ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್‌ ಸುತ್ತುವರೆದಿದೆ ಎಂದರು.

ಪ್ರಕರಣ ಸಂಬಂಧ ಡಿಕೆಶಿ ಅವರು ಷಡ್ಯಂತ್ರ ಅಂತಾ ಹೇಳಿದ್ದಾರೆ. ಡಿಕೆಶಿ ಹೇಳಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ನಾನು ಸದನದಲ್ಲಿ ಡಿಮ್ಯಾಂಡ್ ಮಾಡುತ್ತೇನೆ. ಎಸ್‌ಐಟಿಯ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಆ ಷಡ್ಯಂತ್ರ ಮಾಡಿದ್ದು ಯಾರು ಎಂದೂ ಹೇಳಬೇಕು. ಇಲ್ಲವಾದಲ್ಲಿ ನಾವು ಸದನದಲ್ಲಿ ಗಲಾಟೆ ಮಾಡುತ್ತೇವೆ. ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು. ಸುಮ್ಮನೇ ಎಸ್‌ಐಟಿ ತನಿಖೆ ಮಾಡೋದಲ್ಲ ಎಂದು ಕುಟುಕಿದರು.

Home add -Advt

ಧರ್ಮಸ್ಥಳ ಭಾಗದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳುತ್ತಿರುವ ವ್ಯಕ್ತಿ ಮತಾಂತರಗೊಂಡಿದ್ದಾನೆ ಎಂಬ ವದಂತಿಗಳಿವೆ. ಆತನ ಹಿನ್ನೆಲೆಯ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. 

ಹೂತಿಟ್ಟಿರುವ ಶವಗಳನ್ನು ತೋರಿಸುವುದಾಗಿ ಹೇಳುತ್ತಿರುವ ಮಾಸ್ಕ್ ಮ್ಯಾನ್ ಯಾರು, ಆತನ ಹೆಸರು ಏನು? ಭೀಮ ಎಂದು ಹೇಳಲಾಗುತ್ತಿದೆ. ಆದರೆ ಅದು ಆತನ ನಿಜವಾದ ಹೆಸರಲ್ಲ. ಆ ವ್ಯಕ್ತಿ ಮತಾಂತರಗೊಂಡಿದ್ದಾನೆ ಎನ್ನಲಾಗುತ್ತಿದೆ ಎಂದು ಆರೋಪಿಸಿದರು.

Related Articles

Back to top button