Kannada NewsKarnataka News

ಅರವಿಂದ ಗೌಡ ಪಾಟೀಲ ನಿಧನ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ: ಯರಗಟ್ಟಿಯ ಹಿರಿಯ ಸಾಮಾಜಿಕ ಮುಂದಾಳು ಅರವಿಂದಗೌಡ ಯಲ್ಲಪ್ಪಗೌಡ ಪಾಟೀಲ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಯರಗಟ್ಟಿ ಪಟ್ಟಣದ ರಡ್ಡಿ ಸಮಾಜದ  ಹಿರಿಯ ಮುಖಂಡ, ಪ್ರಗತಿಪರ ರೈತ, ದಿ ರಡ್ಡಿ ಸಹಕಾರಿ ಬ್ಯಾಂಕ್ ಧಾರವಾಡದ ನಿರ್ದೇಶಕ, ರಡ್ಡಿ ಸಹಕಾರಿ ಬ್ಯಾಂಕ್ ಯರಗಟ್ಟಿ ಶಾಖೆ ಅಧ್ಯಕ್ಷ, ಶ್ರೀ ಮರಡಿ ಬಸವೇಶ್ವರ ವಿದ್ಯಾಪ್ರಸಾರ ಮಂಡಳಿಯ ಉಪಾಧ್ಯಕ್ಷ, ಯರಗಟ್ಟಿ ಮಂಡಳ ಪಂಚಾಯತಿಯ ಮಾಜಿ ಸದಸ್ಯ, ಭಾರತೀಯ ಜನತಾ ಪಕ್ಷದ ಸವದತ್ತಿ ತಾಲೂಕಿನ ಮುಖಂಡರಾಗಿ ಗುರುತಿಸಿಕೊಂಡಿದ್ದ ಅರವಿಂದಗೌಡ ಯಲ್ಲಪ್ಪಗೌಡ ಪಾಟೀಲ ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದರು.

ಅವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ.

ಅವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಯರಗಟ್ಟಿಯ ಕೆಇಬಿ ಹತ್ತಿರದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.

Home add -Advt

ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳಿಗೆ ಗುರಿ ಇಟ್ಟ ರಮೇಶ್ ಜಾರಕಿಹೊಳಿ; ಬಿಜೆಪಿ ಕೊಳದಲ್ಲಿ ಎದ್ದಿದೆ ದೊಡ್ಡ ಅಲೆ

https://pragati.taskdun.com/a-single-stone-ramesh-jarakiholi-target-for-many-birds/

ಕಿತ್ತೂರು ತಹಸಿಲ್ದಾರ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ

https://pragati.taskdun.com/lokayukta-trapped-kittur-tahasildar/

Related Articles

Back to top button