*ಇನ್ಮುಂದೆ ಎಣ್ಣೆ ರೇಟ್ ಕೇಳಿದ್ರೇನೆ ಕಿಕ್ ಬರತ್ತೆ.. ಬರೆದಿಟ್ಟುಕೊಳ್ಳಿ… ಎಂದ ಆರ್.ಅಶೋಕ್*
ಪ್ರಗತಿವಾಹಿನಿ ಸುದ್ದಿ; ಬಾಗೇಪಲ್ಲಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಳೆಯೂ ಹಿಂದೆ ಹೋಯ್ತು. ಕೆ.ಆರ್.ಎಸ್.ಖಾಲಿಯಾಗಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಾತನಾಡಿದ ಮಾಜಿ ಸಚಿವರು, ಕಾಂಗ್ರೆಸ್ ಸರ್ಕಾರ 2000 ರೂಪಾಯಿ ಕೊಟ್ಟು 4000 ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಜನ ಹೇಳುತ್ತಿದ್ದಾರೆ. ಹೊಸದಾಗಿ ಕರೆಂಟ್ ಕನೆಕ್ಷನ್ ತೆಗೆದುಕೊಂಡ್ರೆ ಶೇ.70ರಷ್ಟು ದರ ಹೆಚ್ಚಿಸುತ್ತಿದ್ದಾರೆ. ಪೆಟ್ರೋಲ್, ಡಿಸೆಲ್ ದರ ಸಹ ಜಾಸ್ತಿ ಮಾಡ್ತಾರೆ ಎಂದು ಕಿಡಿ ಕಾರಿದರು.
ಮದ್ಯದ ದರವೂ ಹೆಚ್ಚಾಗಲಿದೆ. ಬಾರ್ ಗಳಲ್ಲಿ ಮದ್ಯದ ರೇಟ್ ಜಾಸ್ತಿ ಮಾಡ್ತಾರೆ ಬರೆದಿಟ್ಟುಕೊಳ್ಳಿ. ಇನ್ಮುಂದೆ ಎಣ್ಣೆ ಹೊಡೆದ್ರೆ ಕಿಕ್ ಬರಲ್ಲ, ರೇಟ್ ಕೇಳಿದ್ರೇನೆ ಕಿಕ್ ಬರುತ್ತೆ ಎಂದು ವಾಗ್ದಾಳಿ ನಡೆಸಿದರು.
ಈ ಬಾರಿ ಚುನಾವಣೆಯಲ್ಲಿ ಗೆಲ್ತೀವಿ ಎಂದು ಕಾಂಗ್ರೆಸ್ ನಾಯಕರಲ್ಲಿ ನಂಬಿಕೆ ಇರಲಿಲ್ಲ. ನಂಬಿಕೆ ಇದ್ದಿದ್ರೆ ಗ್ಯಾರಂಟಿಗಳನ್ನೇ ಘೋಷಣೆ ಮಾಡ್ತಿರಲಿಲ್ಲ. ಅತಂತ್ರ ಬಂದ್ರೆ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡೋಣ ಆ ಮೇಲೆ ಎಲ್ಲಾ ಜೆಡಿಎಸ್ ಮೇಲೆ ಆರೋಪ ಮಾಡೋಣ ಎಂದಿದ್ದರು. ಆದರೆ ಜೆಡಿಎಸ್ ಗೆ ಹೋಗುವ ಮತಗಳು ಕಾಂಗ್ರೆಸ್ ಗೆ ಶಿಫ್ಟ್ ಆಗಿವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ