
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ತಮ್ಮದೇ ಹಳಿಕೆಯಿಂದ ಹಿಂದೆ ಸರಿಯುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರಕಾರಿ ನೌಕರರಿಗೆ ದೊಡ್ಡ ಶಾಕ್ ನೀಡಿದ್ದಾರೆ.
ರಾಜ್ಯ ಸರಕಾರಿ ನೌಕರರಿಗೆ 2006ರಿಂದ ಜಾರಿಗೊಳಿಸಲಾಗಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಯನ್ನು ರದ್ದುಪಡಿಸಿ , ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಸದಸ್ಯ ಎಸ್.ಎಲ್.ಭೋಜೇಗೌಡ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿ ಎನ್ ಪಿಎಸ್ ರದ್ದುಪಡಿಸುವ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ. ಈ ಸಂಬಂಧ ಯಾವುದೇ ಸಮಿತಿ ರಚಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ 11ರಂದು ಈ ಕುರಿತು ತಾವೇ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿಗಳು ಈಗ ಉಲ್ಟಾ ಹೊಡೆದಿದ್ದಾರೆ.
ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡಿ ಹಳೆ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದು ನೀಡಿದ್ದರು.
ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಅರುಣ ಶಹಾಪುರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದರು.
ರಾಜ್ಯದ ಸರಕಾರಿ ನೌಕರರು ನಿಮ್ಮ ಮೇಲೆ ಅಪಾರವಾದ ಭರವಸೆ ಇಟ್ಟುಕೊಂಡಿದ್ದಾರೆ. ಅತ್ಯಂತ ಸರಳವಾದ ಪ್ರಶ್ನೆ ಇದೆ. ಬೇರೆ ರಾಜ್ಯಗಳಂತೆ ಇಲ್ಲೂ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇದಕ್ಕೆ ಉತ್ತರಿಸಲು ಕಾಲಾವಕಾಶ ಏಕೆ ಬೇಕು ಎಂದು ಅರುಣ ಶಹಾಪುರ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಬೊಮ್ಮಾಯಿ, ಇದು ಪಾಲಿಸಿ ಚೇಂಜ್ ಆಗಬೇಕಿದೆ. ಬೇರೆ ರಾಜ್ಯಗಳಲ್ಲಿ ಮಾಡಿರುವುದನ್ನೂ ತರಿಸಿಕೊಳ್ಳುತ್ತಿದ್ದೇನೆ. ಹಣಕಾಸಿನ ವ್ಯವಸ್ಥೆಯಾಗಬೇಕಿದೆ. ಆದ್ದರಿಂದ ಈಗ ಉತ್ತರಿಸಿದರೆ ನಿಮಗೆ ಸಮಾಧಾನವಾಗುವುದಿಲ್ಲ. ಹಾಗಾಗಿ ಅಂತಹ ಉತ್ತರ ಕೊಡುವುದು ಬೇಡ ಎಂದು ಸುಮ್ಮನಿದ್ದೇನೆ. ರೆಗ್ಯುಲರ್ ಉತ್ತರ ಕೊಡಬೇಕೆಂದರೆ ಕೊಡುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು.
ನಿರ್ಣಯ ಮಾಡಿ ಎಂದು ಅರುಣ ಶಹಾಪುರ ಕೋರಿದರು. ಅದಕ್ಕೆ ಮರು ಉತ್ತರಿಸಿದ ಬೊಮ್ಮಾಯಿ, ನಿರ್ಣಯ ಮಾಡಿ ನಿಮಗೆ ಉತ್ತರ ನೀಡುತ್ತೇನೆ ಎಂದಿದ್ದರು.
ಇದಕ್ಕೂ ಮೊದಲು ಮಾರ್ಚ್ 9ರಂದು ಅಜಯ ಧರ್ಮ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಈ ಸಂಬಂಧ ರಚಿಸಲಾಗಿರುವ ಅಧಿಕಾರಿಗಳ ಸಮಿತಿಯ ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ ಎಂದಿದ್ದರು. 2018ರಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, ಸಮಿತಿಯ ವರದಿ ನೀರೀಕ್ಷೆಯಲ್ಲಿದ್ದೇವೆ ಎಂದಿದ್ದರು.
ಇದೀಗ ಬೊಮ್ಮಾಯಿ ಉಲ್ಟಾ ಹೊಡೆದಿದ್ದು, ಈ ಸಂಬಂಧ ಸಮಿತಿ ರಚಿಸಿಯೇ ಇಲ್ಲ ಎಂದಿದ್ದಾರೆ.
ಇಲ್ಲಿದೆ ಬೊಮ್ಮಾಯಿ ಉತ್ತರ – CM on NPS 2022-150922 Assembly Mlc Quest Ans
ಅಂದು ಮುಖ್ಯಮಂತ್ರಿಗಳು ಏನುಹೇಳಿದ್ದರು ಕೇಳಿ –
NPS ರದ್ದು: ಸುಳಿವು ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ – ಸರಕಾರಿ ನೌಕರರಿಗೆ ಖುಷಿ ಸುದ್ದಿ
https://pragati.taskdun.com/latest/nps-czncelled/
NPS ರದ್ಧು ಮಾಡಿ OPS ಜಾರಿ ಮಾಡುತ್ತೀರಾ? ನೇರ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸದನದಲ್ಲಿ ಉತ್ತರ
https://pragati.taskdun.com/latest/cancel-the-nps-and-run-the-ops-the-direct-question-was-answered-by-chief-minister-bommai-in-the-house/