Kannada NewsKarnataka NewsLatestPolitics

*ಕಾಂಗ್ರೆಸ್‌ ಆರಂಭದಲ್ಲೇ ಎಡವಿದೆ; ಕೈ ನಾಯಕರು ಕಾಣೆಯಾಗಿದ್ದಾರೆ; ಆರ್‌.ಅಶೋಕ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿಯಿಂದ ಲೋಕಸಭಾ ಚುನಾವಣೆಯ ಪ್ರಚಾರ ಜೋರಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್‌ ನಾಯಕರು ಮಾತ್ರ ಓಡಿಹೋಗಿ ಕಾಣೆಯಾಗಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ವ್ಯಂಗ್ಯವಾಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಕಚೇರಿ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪ್ರಚಾರ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಸಚಿವರು ಸ್ಪರ್ಧಿಸುವ ನಿರೀಕ್ಷೆ ಇದ್ದರೂ, ಈಗ ಎಲ್ಲರೂ ಕಾಣೆಯಾಗಿದ್ದಾರೆ. ಯಾರೂ ಬೆಂಗಳೂರಿನಲ್ಲಿಲ್ಲದೆ ಹಳ್ಳಿಗಳಿಗೆ ಓಡಿಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆ ಇರುವುದರಿಂದ ಕಾಂಗ್ರೆಸ್‌ ಸಚಿವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಧೈರ್ಯ ಬರುತ್ತಿಲ್ಲ. ಬಿಜೆಪಿ ಗೆಲ್ಲಲಿದೆ ಎನ್ನುವುದು ಚುನಾವಣಾ ಸಮೀಕ್ಷೆಯಲ್ಲೂ ತಿಳಿದುಬಂದಿದೆ. ಜೆಡಿಎಸ್‌ ಮೈತ್ರಿಯ ಜೊತೆಗೆ 28 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯನಿರ್ವಹಿಸಲಾಗುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 4 ಲಕ್ಷದ ಅಂತರ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಬಿಜೆಪಿ ಹೀಗೆ ಸಾಗಿರುವಾಗ, ಕಾಂಗ್ರೆಸ್‌ ಮಾತ್ರ ಆರಂಭದಲ್ಲೇ ಎಡವಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

Home add -Advt

ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪನವರ ಮನ ಒಲಿಸುವ ಕೆಲಸವನ್ನು ನಾನೂ ಮಾಡುತ್ತೇನೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ನಡುವಿನ ಮಾತುಕತೆಯ ಸಮಸ್ಯೆ ಅವರ ನಡುವೆಯೇ ಬಗೆಹರಿಯಬೇಕು. ಸಂಧಾನ ಮಾಡಲು ನಮ್ಮ ಕೈಲಾಗುವುದನ್ನು ಮಾಡುತ್ತೇವೆ. ಜೆಡಿಎಸ್‌ ಕೂಡ ಮೂರ್ನಾಲ್ಕು ಕಡೆ ಕ್ಷೇತ್ರವನ್ನು ಕೇಳಿದೆ. ಆದರೆ ಇಲ್ಲಿ ಗೆಲ್ಲುವುದೇ ಮಾನದಂಡ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಬಿಜೆಪಿಯಿಂದ ಒಕ್ಕಲಿಗರಿಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ ಎಂದರು.

Related Articles

Back to top button