Karnataka News

*ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ಮಾಡಿ ವಿಜೃಂಭಿಸಿದ ಶಾಸಕನ ಪುತ್ರ ಹಾಗೂ ಸಹೋದರ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಹಾಗೂ ಸಹೋದರ ಇಬ್ಬರೂ ಮೊಲಗಳನ್ನು ಬೇಟೆಯಾಡಿ ಮೆರವಣಿಗೆ ನಡೆಸಿ ವಿಜೃಂಭಿಸಿದ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರವಿಹಾಳ ಅವರ ಮಗ ಸತೀಶ್ ಗೌಡ ಹಾಗೂ ಸಹೋದರ ಸಿದ್ದನಗೌಡ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಮೊಲಗಳನ್ನು ಬೇಟೆಯಾಡಿ ಬಳಿಕ ಮಾರಕಾಸ್ತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿ, ಕುಣಿದು ಕುಪ್ಪಳಿಸಿದ್ದಾರೆ.

ಮೊಲಗಳ ಬೇಟೆಯಾಡುವುದು ಅರಣ್ಯ ಇಲಾಖೆ ಕಾಯ್ದೆಯಡಿ ಅಪರಾಧವಾಗಿದ್ದರೂ ಈವರೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಶಾಸಕರ ಪುತ್ರ ಹಾಗೂ ಸಹೋದರ ಕಾಡುಪ್ರಾಣಿ ಬೇಟೆಯಾಡಿ ಸಂಭ್ರಮಾಚರಣೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಈವರೆಗೂ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

Related Articles

Back to top button