*ರಾಹುಲ್ ಗಾಂಧಿ ಅಗ್ನಿವೀರ ಯೋಜನೆಯ ಬಗ್ಗೆ ಅಪಮಾನ ಮಾಡಿದ್ದಾರೆ: ಕುಮಾರ ಹೀರೆಮಠ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಅಗ್ನಿ ವೀರ ಯೋಜನೆಯ ಬಗ್ಗೆ ಅಪಮಾನ ಮಾಡಿದ್ದಾರೆ. ಇದು ದೇಶದ ಸೈನಿಕರಿಗೆ ಮಾಡಿದ ಅಪಮಾನ ಕೂಡಲೇ ಅವರು ಕ್ಷಮೆ ಕೇಳಬೇಕೆಂದು ರಾಜ್ಯ ಬಿಜೆಪಿ ಮಾಜಿ ಸೈನಿಕರ ಪ್ರಕೋಷ್ಠ ಸಮಿತಿ ಸದಸ್ಯ ಕುಮಾರ ಹೀರೆಮಠ ಒತ್ತಾಯಿಸಿದರು.
ಇಂದು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸೇವೆ ಸಲ್ಲಿಸಲು ಸೈನಿಕರಿಗಾಗಿ ಅಗ್ನಿ ವೀರ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವುದನ್ನು ಸಾಕಷ್ಟು ಯೋಧರು ಲಾಭ ಪಡೆದುಕೊಂಡಿದ್ದಾರೆ. ಸೈನಿಕರ ಶಿಸ್ತುಬದ್ಧತೆಯನ್ನು ಅಗ್ನಿವೀರ ಯೋಜನೆಯಲ್ಲಿ ಕಲಿಯುತ್ತಾರೆ. ಅಗ್ನಿ ವೀರ ಯೋಜನೆ ಬಗ್ಗೆ ಸಾಕಷ್ಟು ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ. ಆದರೆ ಐದು ವರ್ಷ ಸೇವೆ ಮಾಡಿದ ಬಳಿಕ ಸರ್ಕಾರಿ ಸೇವೆ ಸಲ್ಲಿಸಬಹುದು. 1975 ಮಹಿಳಾ ಸೈನಿಕರು ಅಗ್ನಿವೀರ ಯೋಜನೆಯಲ್ಲಿ ದೇಶದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಉತ್ತಮವಾದ ಸಂಬಳ ಸಹ ಇದೆ. 12 ಲಕ್ಷ ಹಣ ಸೇವೆ ಸಲ್ಲಿಸಿ ಹೊರ ಬರುವಾಗ ಸಿಗುತ್ತದೆ. ಯಾವುದೇ ರಾಜಕೀಯ ವ್ಯಕ್ತಿಗಳ ಮಕ್ಕಳು ಸೇನೆಗೆ ಸೇರುವುದಿಲ್ಲ. ಮಾಜಿ ಸೈನಿಕರ ಹಾಗೂ ರೈತರ ಮಕ್ಕಳು ಸೇನೆಗೆ ಸೇರಿ ದೇಶದ ಸೇವೆ ಮಾಡುತ್ತಾರೆ. ಅಗ್ನಿವೀರ ಯೋಜನೆ ಉತ್ತಮವಾಗಿದೆ. ಯಾವುದೇ ಇಲಾಖೆಯಲ್ಲಿ ಸೇವೆ ಮಾಡಿದ್ದರೂ ಅಗ್ನಿವೀರ ಯೋಜನೆಯಲ್ಲಿ ಸೇನೆಗೆ ಸೇರಬಹುದು ಎಂದರು.
ಮಾಜಿ ಸೈನಿಕರಾದ ರಮೇಶ ಚೌಗುಲಾ, ಜಗದೀಶ್ ಪೂಜಾರಿ, ಲಕ್ಷ್ಮಣ ದಂಡಾಪುರಿ, ರಾಜೇಂದ್ರ. ಹಣಕಿ, ಸಂಗಪ್ಪ ಮೇತ್ರಿ, ಬಿಜೆಪಿ ಮುಖಂಡ ಸಚಿವ ಕಡಿ, ವಿಠ್ಠಲ ಸಾಯನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ