ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಟ್ಟ ರಾಹುಲ್ ಜಾರಕಿಹೊಳಿ ಯುವಕರಿಗೆ ಆದರ್ಶ: ಗುರುಸಿದ್ದೇಶ್ವರ ಶ್ರೀ
ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ರಾಹುಲ್ ಜಾರಕಿಹೊಳಿ ದಿನದಿಂದ ದಿನಕ್ಕೆ ರಾಜಕೀಯ, ಸಾಮಾಜಿಕವಾಗಿ ಬೆಳೆಯುತ್ತಿದ್ದು, ಯುವಕರಿಗೆ ಮಾದರಿಯಾಗುತ್ತಿದ್ದಾರೆ ಎಂದು ಹತ್ತರಗಿ ಕಾರಿ ಮಠದ ಶ್ರೀ ಗುರು ಸಿದ್ದೇಶ್ವರ ಮಹಾಸ್ವಾಮೀಜಿಗಳು ಹೇಳಿದರು.
ಹುಕ್ಕೇರಿ ತಾಲೂಕಿನ ಯಮಕನಮರಡಿ ಮತಕ್ಷೇತ್ರದ ಅಲದಾಳ ಗೆಸ್ಟ್ ಹೌಸ್ ನಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಾಹುಲ್ ಜಾರಕಿಹೊಳಿ ಅವರ 24ನೇ ಜನ್ಮದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ರಾಹುಲ್ ಜಾರಕಿಹೊಳಿ ಮಾದರಿವಾಗಿ ಬೆಳೆಯುತ್ತಿದ್ದು, ತಂದೆ ಸತೀಶ್ ಜಾರಕಿಹೊಳಿ ಅವರ ದಾರಿಯಲ್ಲೇ ರಾಹುಲ್ ಕೂಡ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಟ್ಟು ಸಾಗುತ್ತಿದ್ದಾರೆ ಎಂದರು.
ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ನನ್ನ ಜನ್ಮದಿನ ಅದ್ದೂರಿಯಾಗಿ ಆಚರಣೆ ಮಾಡಿದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು. ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯ ಇದೇ ರೀತಿ ಮುಂದೆವರೆಯಲಿ. ನಿಮ್ಮ ಕಷ್ಟ, ಸುಖಗಳಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.
ಯುವಕರ ಏಳ್ಗೆಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶೈಕ್ಷಣಿಕವಾಗಿಯೂ ಬೆಳಗಾವಿ ಜಿಲ್ಲೆ ಸೇರಿದಂತೆ ಯಮಕನಮರಡಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ತಂದೆ ಸತೀಶ್ ಜಾರಕಿಹೊಳಿ ಅವರು ತಮ್ಮ 20 ವರ್ಷದ ರಾಜಕೀಯ ಜೀವನದಲ್ಲಿ 70% ಸಮಾಜ ಸೇವೆಗೆ ಸಮಯ ಮೀಸಲು ಇಟ್ಟಿದ್ದು, ಕುಟುಂಬಕ್ಕಿಂತ ಸಮಾಜ ಸುಧಾರಣೆಗೆ ದುಡಿಯುತ್ತಿದ್ದಾರೆ. ಅವರ ಆಶಯದಂತೆ ನಾನು ಕೂಡ ಸಾಮಾಜಿಕ ಸೇವೆಗೆ ಶ್ರಮಿಸುತ್ತೇನೆ ಎಂದರು.
ಚುನಾವಣೆ ಬಂದಾಗ ನಿಮ್ಮ ಮನೆಗೆ ಬರುವ ನಾಯಕರ ಮಾತು, ಅಪಪ್ರಚಾರಕ್ಕೆ ಕಿವಿಗೊಡದೇ ನಮ್ಮ ಬೆಂಬಲಕ್ಕೆ ನೀವು ನಿಲ್ಲಬೇಕು. ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿಯೂ ಯಮಕನಮರಡಿ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಅಲದಾಳ ಗೆಸ್ಟ್ ಹೌಸ್ ನಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ರಾಹುಲ್ ಜಾರಕಿಹೊಳಿ ಅವರ 24ನೇ ಜನ್ಮದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ರಕ್ತ ದಾನ ಮಾಡಿದರು.
ಈ ಸಂದರ್ಭದಲ್ಲಿ ಕೃಪಾನಂದ ಮಹಾಸ್ವಾಮೀಜಿ ಜಾರಕಿಹೊಳಿ, ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ, ಕಾಂಗ್ರೆಸ್ ಮುಖಂಡರಾದ ಕಿರಣ ರಜಪೂತ, ರವಿ ಜಿನರಾಳೆ, ಮಹಾಂತೇಶ ಮಗದುಮ್, ಜಂಗ್ಲಿಸಾಬ್ ನಾಯಕ, ಬಸವರಾಜ್ ದೇಸಾಯಿ, ಅರ್ಜುನ ಗಸ್ತಿ, ದಸಗೀರ್ ಬಸಾಪೂರ, ಈರಣ್ಣಾ ಬಿಸಿರೊಟ್ಟಿ, ಮಹಾದೇವ ಪಠೋಳಿ, ಟಿ.ಡಿ. ಜಕ್ಕಪ್ಪಗೋಳ, ಮಹೇಶ ಕಡಪಟ್ಟಿ, ಅಶೋಕ ತಳವಾರ, ಬಸವರಾಜ್ ಉತ್ನಾಳಿ, ಶಿವಪ್ಪ ಪೂಜೇರಿ, ರವೀಂದ್ರ ನಾಯ್ಕರ್, ಉಷಾ ನಾಯಕ್, ಮನಿಷಾ ನಾಯಕ್, ಮಂಜುನಾಥ ಪಾಟೀಲ, ದಯಾನಂದ ಪಾಟೀಲ, ವಿಜಯ ತಳವಾರ ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರು, ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ರಾಮನಗರಕ್ಕೆ ಆಗಮಿಸಿದ ಕಿತ್ತೂರು ವೀರಜ್ಯೋತಿ ಯಾತ್ರೆ
https://pragati.taskdun.com/latest/kitturu-veerajyoti-yatreramanagaramandya/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ