*ಚರಂಡಿ ಮತ್ತು ರಸ್ತೆಗಳಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ: ಜಿಪಂ ಸಿಇಓ ರಾಹುಲ್ ಶಿಂಧೆ*
ಪ್ರಗತಿವಾಹಿನಿ ಸುದ್ದಿ: ಮಾನ್ಸೂನ್ ಪ್ರಾರಂಭವಾಗಿರುವದರಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ, ಪಂಚಾಯತಗಳಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ೧೫-೨೦ ದಿನಗಳಲ್ಲಿ ವಾಟರ ಟ್ಯಾಂಕಗಳ ಸ್ವಚ್ಛತೆ ಕಾಪಾಡುವುದು, ನಿರಂತರವಾಗಿ ನೀರಿನ ಮಾದರಿ ಪರಿಶೀಲನೆ ಮಾಡುವುದು ಹಾಗೂ ಚರಂಡಿ ಮತ್ತು ರಸ್ತೆಗಳಲ್ಲಿ ಎಲ್ಲಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕೆಂದು ಎಲ್ಲ ತಾಲೂಕಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ (ಜೂ.೧೨) ತಾಲ್ಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ತಿ ಸಮೀಕ್ಷೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಬಾಕಿ ಆಸ್ತಿ ಸಮೀಕ್ಷೆ ಜಚಿಣಚಿ ಗಳನ್ನು ಠಿ೨ ರಡಿಯಲ್ಲಿ ಒಂದು ವಾರದಲ್ಲಿ uಠಿಜಚಿಣe ಮಾಡಲು ಸೂಚಿಸಿದರು. ಈ ಸಾಲಿನ ಖಿಚಿx ಛಿoಟಟeಛಿಣioಟಿs ಪ್ರಕ್ರಿಯೆಯನ್ನು ೧೦೦% ಸಾಧಿಸಲು ಎಲ್ಲ ಇಔ/Pಆಔ ರವರು ಕ್ರಮ ಜರುಗಿಸಲು ಸೂಚಿಸಿದರು.
“ಸಕಲ ಯೋಜನೆ” ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಆರ್ಜಿಗಳನ್ನು ಮುಂದಿನ ೨ ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು,ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಗವಹಿಸಲು ತಿಳಿಸಿದರು, ಇಲ್ಲವಾದಲ್ಲಿ ಕ್ರಮ ಜರುಗಿಸುವುದಾಗಿ ಸೂಚಿಸಿದರು. ಅದೇ ರೀತಿ PಆI (Pಚಿಟಿಛಿhಚಿಥಿಚಿಣ ಆeveಟoಠಿmeಟಿಣ Iಟಿಜex) ಪ್ರಕ್ರಿಯೆಯನ್ನು ಮುಂದಿನ ೦೨ ದಿನದಲ್ಲಿ ಪೂರ್ಣಗೋಳಿಸಲು ನಿರ್ದೇಶನ ನೀಡಿದರು.
ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಜನರಿಗೆ ಕೆಲಸ ನೀಡಿ ತಾಲ್ಲೂಕಾವಾರು ನೀಡಿರುವ ಗುರಿಗನುಗುಣವಾಗಿ ಪ್ರಗತಿ ಸಾಧಿಸುವುದು, ಸನ್ ೨೦೨೩-೨೪ ನೇ ಸಾಲಿನಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಅಂತಹ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಪೂರ್ಣಗೊಳಿಸಬೇಕು.
೨೦೨೪-೨೫ನೇ ಸಾಲಿನ ನರೇಗಾ ಯೋಜನೆಯಡಿ ಆದ್ಯತೆ ಕಾಮಗಾರಿಗಳಾದ ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಅಡುಗೆ ಕೋಣೆ, ಎಸ್.ಡಬ್ಲ್ಯೂ.ಎಮ್ ಕಟ್ಟಡ ಹಾಗೂ ಗ್ರಾಮ ಪಂಚಾಯತ ಕಟ್ಟಡಗಳನ್ನು ಆದ್ಯತೆ ಮೇರಗೆ ಕೈಗೊಳ್ಳುವಂತೆ ಸೂಚಿಸಿದರು. ಓಂಬಡ್ಸಮೆನ್ ವಸೂಲಾತಿ ಮೇಲೆ ಬಾಕಿ ಇರುವ ಮೊತ್ತವನ್ನು ಆದ? ಬೇಗ ವಸೂಲಾತಿ ಮಾಡಿ ಜಿಲ್ಲಾ ಪಂಚಾಯತಗೆ ವರದಿ ಸಲ್ಲಿಸಲು ಸೂಚಿಸಿದರು.
ಮುಂದುವರೆದು, ಸಾಮಾಜಿಕ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ರಾಯಬಾಗ ತಾಲೂಕಿನಲ್ಲಿ ೦೨ ಗ್ರಾಮ ಪಂಚಾಯತ ಮತ್ತು ಚಿಕ್ಕೋಡಿ ತಾಲೂಕಿನಲ್ಲಿ-೦೧ ಗ್ರಾಮ ಪಂಚಾಯತ ಗ್ರಾಮ ಸಭೆಯನ್ನು ಅತೀ ತುರ್ತಾಗಿ ಜರುಗಿಸಿ ಶೇ.೧೦೦% ರ? ಪ್ರಗತಿ ಸಾಧಿಸಲು ತಿಳಿಸಿದರು.
ಟಾಪ್ ೧೦ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಕುಂಠಿತವಾಗಿದ್ದು, ಅಡಾಕ್ ಸಮಿತಿ ಸಭೆಗಳನ್ನು ಕರೆದು ಪ್ರಕರಣಗಳನ್ನು ಇತ್ಯರ್ಥಿಪಡಿಸಿ ಪ್ರಗತಿ ಸಾಧಿಸಲು ಸೂಚಿಸಿದರು.
ಓಖಐಒಗೆ ಸಂಬಂಧಿಸಿದಂತೆ ವಿನೂತನವಾದ ಜೀವನೋಪಾಯ ಚಟುವಟಿಕೆ ಬಗ್ಗೆ ಮಹಿಳಾ ಸ್ವ-ಸಹಾಯ ಗುಂಪು ಸದಸ್ಯರಿಗೆ ತಿಳಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಕುಟುಂಬದ ಜೀವನೋಪಾಯ ಸುಧಾರಿಸುವುದರ ಬಗ್ಗೆ ಸಲಹೆ ನೀಡಿದರು.
ಸ್ವಚ್ಛ ಭಾರತ ಮಿ?ನ್ ಯೋಜನೆಗೆ ಸಂಬಂಧಿಸಿದಂತೆ SWಒ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ದಿನ ಕಸ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿರುಬೇಕು. ದ್ರವ ತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಗಿತಗೊಂಡ ಕಾಮಗಾರಿಗಳನ್ನು ಪ್ರಾರಂಭಮಾಡಿ ಆದ? ಬೇಗ ಮುಕ್ತಾಯಗೊಳಿಸುವುದು ಹಾಗೂ ವೈಯಕ್ತಿಕ ಶೌಚಾಲಯದ ಪ್ರಗತಿ ಸಾಧಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ ರಡಿ ಬರುವ ಎಲ್ಲ ಇಲಾಖೆಗಳ ಸರ್ಕಾರಿ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ವೇತನವು ಪ್ರತಿ ಮಾಹೆ ೫ನೇ ತಾರಿಕಿನೊಳಗೆ ಆಗಲು ಕ್ರಮವಿಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗನಾಯಕ, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ರವಿ ಬಂಗಾರೆಪ್ಪನವರ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯತ್ ರಾಜ್ ಹಾಗೂ ಜಿ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ