
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಮೀನಿನಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ.
ಮೃತರು ಛತ್ತೀಸ್ ಗಢ ಮೂಲದ ವಿಷ್ಣು (26), ಶಿವರಾಮ್ (28) ಬಲರಾಮ್ (30) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಬೋರವೆಲ್ ಕೊರೆದು ರಾತ್ರಿ ಕಾಲುದಾರಿಯಲ್ಲಿ ಮೂವರು ಮಲಗಿದ್ದರು. ರಾತ್ರಿ ವೇಳೆ ಅದೇ ದಾರಿಯಲ್ಲಿ ಬಂದ ಜೆಸಿಬಿ ಮೂವರ ಮೇಲೆ ಹರಿದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ನಿಲವಂಜಿ ಗ್ರಾಮದ ನಿವಾಸಿ ಬಾಲಯ್ಯ ಎಂಬುವವರಿಗೆ ಸೇರಿದ ಜೆಸಿಬಿ ಮೂವರ ಮೇಲೆ ಹರಿದಿದ್ದು, ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ