Kannada NewsKarnataka NewsLatest

*ಸಹೊದ್ಯೋಗಿ ಇಂಜಿನಿಯರ್ ಗೆ ಲೈಂಗಿಕ ಕಿರುಕುಳ; ಜೆಸ್ಕಾಂ ಇಇ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರು ಜೆಸ್ಕಾಂ ಮಹಿಳಾ ಎಂಜಿನಿಯರ್ ಗೆ ಹಿರಿಯ ಇಂಜಿನಿಯರ್ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ಜೆಸ್ಕಾಂ ಇಇ ಶ್ರೀನಿವಾಸ್ ಅಮಾನತುಗೊಂಡ ಇಂಜಿನಿಯರ್. ನೈಟ್ ಶಿಫ್ಟ್ ವೇಳೆ ಮಹಿಳಾ ಇಂಜಿನಿಯರ್ ಗೆ ಶ್ರೀನಿವಾಸ್ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು.

ಸಂತ್ರಸ್ತ ಮಹಿಳ ಐಂಜಿನಿಯರ್ ಹಾಗೂ ಜೆಸ್ಕಾಂ ಸಿಬ್ಬಂದಿಗಳು ಇಇ ಶ್ರೀನಿವಾಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಜೆಸ್ಕಾಂ ಸಿಬ್ಬಂದಿಗಳ ಧರಣಿ ತೀವ್ರಗೊಳ್ಳುತ್ತಿದ್ದಂತೆ ಆರೋಪಿ ಇಇ ಶ್ರೀನಿವಾಸ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.

ರಾಯಚೂರಿನ 220 ಕೆವಿ ಸ್ವೀಕರಣಾ ಕೇಂದ್ರದಲ್ಲಿ ನೈಟ್ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಇಂಜಿನಿಯರ್ ಗೆ ಇಇ ಶ್ರೀನಿವಾಸ್ ಕಿರುಕುಳ ನೀಡಿದ್ದ. ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಮಹಿಳಾ ಇಂಜಿನಿಯರ್ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿದ ವೇಳೆ ಇಇ ಶ್ರೀನಿವಾಸ್ ಕಿರುಕುಳ ನೀಡಿರುವ ಬಗ್ಗೆ ಸಾಕ್ಷ್ಯಾಧಾರ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಇಇ ಶ್ರೀನಿವಾಸ್ ನನ್ನು ಸಸ್ಪೆಂಡ್ ಮಾಡಲಾಗಿದೆ.

Related Articles

Back to top button