
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಇಬ್ಬರು ಮಕ್ಕಳ ತಂದೆಯೊಬ್ಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಬಾಲಕಿ ಜೊತೆಗೆ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರಿನ ಲಿಂಗಸಗೂರ ತಾಲೂಕಿನ ಪೈದೊಡ್ಡಿ ಗ್ರಾಮದಲ್ಲಿ ನಡೆದಿದೆ.
ವಿಷಸೇವಿಸಿದ್ದ ಬಾಲಕಿ ಮಹಾದೇವಿ (17) ಸಾವನ್ನಪ್ಪಿದ್ದು, ನರಸಪ್ಪ (25) ಸ್ಥಿತಿ ಗಂಭೀರವಾಗಿದೆ. ಸಧ್ಯ ನರಸಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದಾಗಲೇ ವಿವಾಹವಾಗಿ ಎರಡು ಮಕ್ಕಳ ತಂದೆಯಾಗಿರುವ ನರಸಪ್ಪ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ಬಾಲಕಿ ಮಹಾದೇವಿಯನ್ನು ಪ್ರೀತಿಸಿದ್ದ. ಇಬ್ಬರೂ ಪ್ರೀತಿಸುತ್ತಿರುವುದಾಗಿ ಹಾಗೂ ಮುಂದಿನ ಜನ್ಮದಲ್ಲಿ ಗಂಡ-ಹೆಂಡತಿಯಾಗೋಣ ಎಂದು ಚೀಟಿಯಲ್ಲಿ ಬರೆದಿಟ್ಟು ವಿಷ ಸೇವಿಸಿದ್ದಾರೆ. ಬಾಲಕಿ ಮಹಾದೇವಿ ಸಾವನ್ನಪ್ಪಿದ್ದರೆ, ನರಸಪ್ಪನ ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ ಪಿ ಹುಲ್ಲೂರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ