*BREAKING: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತೆರಳುತ್ತಿದ್ದಾಗ ತಗುಲಿದ ವಿದ್ಯುತ್ ತಂತಿ; ಯುವಕ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಗನೇಷ ಮೂರ್ತಿ ಉರುಳಿ ಬಿದ್ದಿದ್ದು, ಈ ವೇಳೆ ಯುವಕ ವಿದ್ಯ್ತ್ ತಂದು ತಗುಲಿ ಮೃತಪಟ್ಟಿದ್ದಾರೆ
ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 27 ವರ್ಷದ ಪ್ರೇಮ್ ಕುಮಾರ್ ಮೃತ ದುರ್ದೈವಿ.
ಯುವಕ ಲಾರಿಯಲ್ಲಿ ಗಣೇಶನ ಮೂರ್ತಿಯನ್ನು ಕೊಂಡೊಯ್ಯುತ್ತಿದ್ದ. ವಿದ್ಯುತ್ ತಂತಿ ಗಣೇಶನ ತಲೆ ಭಾಗಕ್ಕೆ ಟಚ್ ಆಗಿದೆ. ಪರಿಣಾಮ ಮೂರ್ತಿ ಉರುಳಿಬಿದ್ದಿದೆ. ಮೂರ್ತಿ ಬಿದ್ದ ರಭಸಕ್ಕೆ ತಂತಿ ಕಟ್ ಆಗಿ ಲಾರಿಯಲ್ಲಿ ಮಲಗಿದ್ದ ಯುವಕನ ಮೇಲೆ ಬಿದ್ದಿದೆ. ಈ ವೇಳೆ ಯುವಕನಿಗೆ ಕರೆಂಟ್ ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ವೇಳೆ ಉಳಿದ ಯುವಕರು ಲಾರಿಯಿಂದ ಹೊರಗೆ ಜಿಗಿದು ಪಾರಾಗಿದ್ದಾರೆ. ಆದರೆ ಲಾರಿಯಲ್ಲಿ ಮಲಗಿದ್ದ ಪ್ರೇಮ್ ಕುಮಾರ್ ಸಾವನ್ನಪ್ಪಿದ್ದಾನೆ. 25 ಕ್ವಿಂಟಾಲ್ ತೂಕದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುತ್ತಿದ್ದ ವೇಳೆ ಈ ಅವಘಡ ನಡೆದಿದೆ.
ಘಟನೆಯಲ್ಲಿ ರಸ್ತೆಗೆ ಉರುಳಿಬಿದ್ದಿದ್ದ ಗಣೇಶ ಮೂರ್ತಿಯನ್ನ ಸದ್ಯ ತೆರವು ಮಾಡಲಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




