ರವಿ ಕೋಕಿತ್ಕರ್ ಮೇಲಿನ ದಾಳಿ: 4 ತಂಡ ರಚನೆ; ಘಟನೆಯ ಮಾಹಿತಿ ನೀಡಿದ ಬೋರಲಿಂಗಯ್ಯ; ಪ್ರಮೋದ ಮುತಾಲಿಕ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲಿನ ಗುಂಡಿನ ದಾಳಿ ಸಂಬಂಧ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಅಪರಾಧಿಗಳ ಪತ್ತೆಗೆ 4 ತಂಡಗಳನ್ನು ರಚಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ರವಿ ಕೊಕಿತ್ಕರ್ ವಾಹನದಲ್ಲಿ ಹಿಂಡಲಗಾ ಗ್ರಾಮಕ್ಕೆ ಬರುವಾಗ ಸ್ಪೀಡ್ ಬ್ರೇಕರ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ. ವಾಹನ ಚಾಲಕನಿಗೂ ಗಾಯಗಳಾಗಿವೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಘಟನೆಯ ಮೇಲಿನ ದ್ವೇಷ ಕಾರಣವೋ, ವಯಕ್ತಿಕ ದ್ವೇಷವೋ ಎನ್ನುವ ಕುರಿತು ಸಹ ತನಿಖೆ ನಡೆಸಲಾಗುವುದು. ಎಲ್ಲೆಡೆ ನಾಕಾಬಂಧಿ ಹಾಕಲಾಗಿದೆ ಎಂದೂ ಅವರು ಹೇಳಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ, ಇದಕ್ಕೆಲ್ಲ ಹಿಂದುಗಳು ಹೆದರುವುದಿಲ್ಲ ಎಂದಿದ್ದಾರೆ. ಭಾನುವಾರ ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಾಗುವುದೂ ಎಂದೂ ಅವರು ತಿಳಿಸಿದ್ದಾರೆ.
ಬೆಳಗಾವಿ: ಶ್ರೀರಾಮ ಸೇನೆ ಮುಖಂಡನ ಮೇಲೆ ಗುಂಡಿನ ದಾಳಿ
https://pragati.taskdun.com/firing-on-shreeram-sene-leader/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ