Kannada NewsKarnataka News

ನಾಗರಿಕ ವೇದಿಕೆಯ ಪರವಾಗಿ ಅಂಗಡಿ, ಕೋರೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹನುಮಾನ ನಗರ ನಾಗರಿಕ ವೇದಿಕೆ ಪರವಾಗಿ ರೇಲ್ವೆ ಸಚಿವ  ಸುರೇಶ ಅಂಗಡಿ ಹಾಗೂ ರಾಜ್ಯ ಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರನ್ನು  ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ ಡಿ.ಎನ್. ಮಿಸಾಳೆ ವಹಿಸಿದ್ದರು. ಪ್ರಾರಂಭದಲ್ಲಿ ಉಮಾ ಮತ್ತು ಜಯಶ್ರೀ ಪ್ರಾರ್ಥನೆ ಹಾಡಿದರು. ನಂತರದಲ್ಲಿ ಪ್ರಾಚಾರ್ಯ ಬಿ.ಎಸ್.ಗವಿಮಠ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎಲ್. ಬಿ. ಕರಾಳೆ ಅಭಿನಂದಿಸಿ ಸಚಿವರಿಗೆ ಶುಭ ಹಾರೈಸಿದರು. ಮಹೇಶ ಬನಸೆ ಇವರು ಪುಷ್ಪಾರ್ಪಣೆ ಮಾಡಿ ಅತಿಥಿಗಳನ್ನು ಸನ್ಮಾನಿಸಿದರು. ಪ್ರಿಯಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು.

Related Articles

Back to top button