
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪ್ಲಾಟ್ ಫಾರ್ಮ್ ಟಿಕೆಟ್ ದರ ಎರಡುಪಟ್ಟು ಹೆಚ್ಚಿಸಿ ಭಾರತೀಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಪ್ರಸ್ತುತ ಪ್ಲಾಟ್ ಫಾರ್ಮ್ ಟಿಕೆಟ್ ದರ 10 ರೂಪಾಯಿ ಇದ್ದು, ಇದೀಗ 30 ರೂಪಾಯಿಗೆ ಏರಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಟಿಕೆಟ್ ಅವಧಿ ಎರಡು ಗಂಟೆ ಮಾತ್ರ ಇರಲಿದೆ ಎಂದು ಇಲಾಖೆ ತಿಳಿಸಿದೆ.