Belagavi NewsBelgaum NewsKannada NewsKarnataka NewsNational
*ಈ ಸಾಲಿನ ಹಿಂಗಾರು ಮಳೆ ಅಂತ್ಯ? : ಮುನ್ಸೂಚನೆ*
ಪ್ರಗತಿವಾಹಿನಿ ಸುದ್ದಿ: ಕಾಸರಗೋಡು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ನವೆಂಬರ್ 26ರಂದು ಉತ್ತರ ಶ್ರೀಲಂಕಾ ಕರಾವಳಿಯ ಮೂಲಕ ಸಾಗಿ ಬರಲಿದ್ದು, ಮುಂದೆ ತಮಿಳುನಾಡು, ಆಂಧ್ರಾ, ಒಡಿಶಾ ಕರಾವಳಿಯ ಬಳಿ ಸಾಗಿ ಉತ್ತರಕ್ಕೆ ಚಲಿಸುವ ಲಕ್ಷಣಗಳಿವೆ.
ಉತ್ತರ ಭಾರತ ಕಡೆಯಿಂದ ಶೀತ ಹಾಗೂ ಒಣ ಹವೆ ದಕ್ಷಿಣ ಭಾರತದ ಕಡೆ ಬೀಸಲು ಆರಂಭವಾಗಿದ್ದರಿಂದ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಅಷೇನು ಗೋಚರಿಸುತ್ತಿಲ್ಲ.
ಈಗಿನಂತೆ ನವೆಂಬರ್ 25ರಿಂದ ರಾಜ್ಯದ ದಕ್ಷಿಣ ಒಳನಾಡು, ಕೊಡಗು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ಇದರೊಂದಿಗೆ ಈ ಸಾಲಿನ ಹಿಂಗಾರು ಮಳೆಯೂ ಕೊನೆಯಾಗಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ