
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಭಾರಿ ಮಳೆಯಿಂದ ಶಿಥಿಲಗೊಂಡಿದ್ದ ಮನೆ ಕುಸಿದುಬಿದ್ದು 20 ದಿನಗಳ ಹಸುಗೂಸು ಹಾಗೂ ವೃದ್ಧೆ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜಿರಾಳದಲ್ಲಿ ನಡೆದಿದೆ.
ಫಕೀರಮ್ಮ (60) ಹಾಗೂ 20 ದಿನಗಳ ಹೆಣ್ಣುಮಗು ಮೃತರು. ಬಾಣಂತಿ ಕನಕಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಮನೆ ಶಿಥಗೊಂಡಿತ್ತು. ಇಂದು ಮುಂಜಾನೆ ಮನೆ ಕುಸಿದು ಬಿದ್ದು ದುರಂತ ಸಂಭವಿಸಿದೆ.