Latest

ರಾಜ್ ಕುಂದ್ರಾ ತಯಾರಿಸುತ್ತಿದ್ದುದು ಪೊರ್ನ್ ವಿಡಿಯೋ ಅಲ್ಲ; ಎರೋಟಿಕಾ ವಿಡಿಯೋ ಎಂದ ಮಾಡೆಲ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಆಪ್ ಮೂಲಕ ಅಪ್ ಲೋಡ್ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧನಕ್ಕೀಡಾಗಿರುವ ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಪರ ವಿಡಿಯೋ ಬಿಡುಗಡೆ ಮಾಡಿರುವ ಮಾಡೆಲ್ ಗೆಹನಾ ವಸಿಷ್ಠ, ರಾಜ್ ಕುಂದ್ರಾ ತಯಾರಿಸುತ್ತಿದ್ದುದು ಉದ್ರೇಕಕಾರಿ ವಿಡಿಯೋಗಳು ಹೊರತು ಪೊರ್ನ್ ವಿಡಿಯೋಗಳಲ್ಲ ಎಂದಿದ್ದಾರೆ.

ರಾಜ್ ಕುಂದ್ರಾ ಬಗ್ಗೆ ಪೊಲೀಸರು ತಪ್ಪು ತಿಳಿದುಕೊಂಡಿರಬಹುದು. ರಾಜ್ ಕುಂದ್ರಾ ತಯಾರಿಸುತ್ತಿದ್ದುದು ನೀಲಿ ಚಿತ್ರಗಳಲ್ಲ, ಎರೋಟಿಕಾ ವಿಡಿಯೋಗಳು ಎಂದು ಗೆಹನಾ ಹೇಳಿದ್ದಾರೆ.

ಎರೋಟಿಕಾ ದೃಶ್ಯಗಳು ಬಾಲಿವುಡ್ ಸಿನಿಮಾಗಳಲ್ಲೂ ಇವೆ. ಎರೋಟಿಕಾ ವಿಡಿಯೋಗಳಿಗೂ ಪೊರ್ನ್ ವಿಡಿಯೋಗಳಿಗೂ ವ್ಯತ್ಯಾಸಗಳಿದ್ದು, ರಾಜ್ ಕುಂದ್ರಾ ಬಗ್ಗೆ ಯಾವುದೇ ಅಭಿಪ್ರಾಯಕ್ಕೆ ಬರುವ ಮೊದಲು ವಿಡಿಯೋಗಳನ್ನು ನೋಡಿ ನಿರ್ಧಾರಕ್ಕೆ ಬನ್ನಿ ಎಂದು ಹೇಳಿದ್ದಾರೆ.

ಅಶ್ಲೀಲ ವಿಡಿಯೋ ಅಪ್ ಲೋಡ್ ಪ್ರಕರಣ ಸಂಬಂಧ ಈ ಹಿಂದೆ ಮುಂಬೈ ಪೊಲೀಸರು ಗೆಹನಾ ವಸಿಷ್ಠ ಅವರನ್ನು ಕೂಡ ಬಂಧಿಸಿದ್ದರು.

ಇನ್ನು ರಾಜ್ ಕುಂದ್ರಾ ಮತ್ತು ಬ್ರಿಟನ್ ನಲ್ಲಿ ವಾಸಿಸುತ್ತಿದ್ದ ಅವರ ಸಹೋದರ ಇಬ್ಬರೂ ಸೇರಿ ಕ್ರೆನಿನ್ ಹೆಸರಿನ ಕಂಪನಿ ಆರಂಭಿಸಿದ್ದರು. ನೀಲಿ ಚಿತ್ರಗಳನ್ನು ಭಾರತದಲ್ಲಿ ಚಿತ್ರೀಕರಿಸಿ ಅದನ್ನು ವಿವಿಧ ಆಪ್ ಮೂಲಕ ಅಪ್ ಲೋಡ್ ಮಾಡುತ್ತಿದ್ದರು. ಭಾರತದಲ್ಲಿ ಸೈಬರ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಈ ಕಂಪನಿಯನ್ನು ವಿದೇಶದಲ್ಲಿ ನೋಂದಾಯಿಸಿಕೊಂಡಿದ್ದರು ಎನ್ನಲಾಗಿದೆ. ಪೊರ್ನ್ ಸಿನಿಮಾ ವ್ಯವಹಾರದಿಂದ ಕುಂದ್ರಾ ಸಾಕಷ್ಟು ಹಣ ಸಂಪಾದಿಸುತ್ತಿದ್ದರು ಎನ್ನಲಾಗಿದ್ದು, ಅವರು ನಡೆಸಿರುವ ವಾಟ್ಸಪ್ ಸಂಭಾಷಣೆ ಲೀಕ್ ಆಗಿದ್ದು, ಪೊಲೀಸರು ಮಹತ್ವದ ದಾಖಲೆ ಎಂದು ಪರಿಗಣಿಸಿದ್ದಾರೆ. ಇನ್ನು ರಾಜ್ ಕುಂದ್ರಾ ವಿರುದ್ಧ ಆರೋಪ ಸಾಬೀತಾದರೆ 7 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಬ್ಲ್ಯೂ ಫಿಲ್ಮ್ ದಂಧೆ ಆರೋಪ; ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಗೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button