Kannada NewsKarnataka NewsLatestPolitics

*ಮತ್ತೆ ಡಿ.ಕೆ.ಶಿವಕುಮಾರ ಭೇಟಿಯಾದ ರಾಜಣ್ಣ!*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಮಾಜಿ ಸಚಿವ ರಾಜಣ್ಣ ಭಾನುವಾರ ರಾತ್ರಿ ಮತ್ತೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಮಾಡಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಭಾನುವಾರ ರಾತ್ರಿ ಬೆಂಗಳೂರಿನ ಹೈಗ್ರೌಂಡ್ಸ್ ಖಾಸಗಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮೊನ್ನೆಯಿಂದ ಇದು ಎರಡನೇ ಭೇಟಿ. ಶನಿವಾರ ರಾತ್ರಿ ಕೂಡ ಭೇಟಿ ಮಾಡಿದ್ದರು.

ಡಿ.ಕೆ.ಶಿವಕುಮಾರ ಏನೇ ಪ್ರಯತ್ನ ಮಾಡಿದರೂ ನಾನು ಸಿದ್ದರಾಮಯ್ಯ ಪರ ಎನ್ನುತ್ತಲೇ ಮತ್ತೆ ಡಿ.ಕೆ.ಶಿವಕುಮಾರ ಅವರನ್ನು ರಾಜಣ್ಣ ಭೇಟಿ ಮಾಡಿದರು.

ಪ್ರಸ್ತುತ ರಾಜಕೀಯ ಗೊಂದಲದ ಸಂದರ್ಭದಲ್ಲಿ ರಾಜಣ್ಣ -ಡಿಕೆಶಿ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಪರ ಪದೇ ಪದೆ ಹೇಳಿಕೆ ನೀಡಿ ಮಂತ್ರಿಸ್ಥಾನ ಕಳೆದುಕೊಂಡಿರುವ ರಾಜಣ್ಣ, ಡಿ.ಕೆ.ಶಿವಕುಮಾರ ವಿರುದ್ಧ ನಿರಂತರ ವಾಕ್ಪ್ರಹಾರ ನಡೆಸುತ್ತಲೇ ಇದ್ದಾರೆ.

Home add -Advt

ಈ ಮಧ್ಯ ಮತ್ತೆ ಮತ್ತೆ ಅವರನ್ನು ಭೇಟಿಯಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

Related Articles

Back to top button