
ಪ್ರಗತಿವಾಹಿನಿ ಸುದ್ದಿ; ಕೃಷ್ಣಗಿರಿ: ಬಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ನಿರ್ಗತಿಕನೊಬ್ಬ 65,000 ರೂಪಾಯಿ ಹಳೇ ನೋಟು ಸಂಗ್ರಹಿಸಿ, 5 ವರ್ಷಗಳ ಬಳಿಕ ಪತ್ತೆಯಾದ ನೋಟುಗಳನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ.
ಬೀದಿ ಬದಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಚಿನ್ನಕನ್ನು ಎಂಬಾತ 5 ವರ್ಷಗಳ ಹಿಂದೆ ತಾನು ಸಂಪಾಸಿದಿಸಿದ ಹಣವನ್ನು ಭದ್ರವಾಗಿ ಸಂಗ್ರಹಿಸಿಟ್ಟಿದ್ದ. ಆದರೆ ಆತನ ಕಷ್ಟದ ಸಂದರ್ಭದಲ್ಲಿ ಎಷ್ಟೇ ಹುಡುಕಿದರೂ ಆ ಹಣ ಪತ್ತೆಯಾಗಿರಲಿಲ್ಲ. ಕಷ್ಟಪಟ್ಟು ಭಿಕ್ಷೆ ಬೆಡಿ ಮತ್ತೆ ಜೀವನ ಸಾಗಿಸುತ್ತಿದ್ದ. ಮತ್ತೆ ಹಣದ ಸಮಸ್ಯೆ ಎದುರಾದಾಗ ತಾನು ಸಂಗ್ರಹಿಸಿಟ್ಟಿದ್ದ ಹಣವನ್ನು ಮತ್ತೆ ಹುಡುಕಲಾರಂಭಿಸಿದ್ದಾನೆ. ಈ ವೇಳೆ 65,000 ರೂಪಾಯಿ ಹಣ ಸಿಕ್ಕಿದೆ.
ಸಂಗ್ರಹಿಸಿಟ್ಟಿದ್ದ ಹಣವೇನೋ ಪತ್ತೆಯಾಗಿದೆ. ಆದರೆ ಪತ್ತೆಯಾದ ಹಣವೆಲ್ಲವೂ ಬ್ಯಾನ್ ಆದ ನೋಟುಗಳಾಗಿವೆ. 2016ರಲ್ಲಿಯೇ ಹಳೆ 500 ಹಾಗೂ 1000 ರೂಪಾಯಿ ನೋಟುಗಳು ನಿಷೇಧಗೊಂಡಿದ್ದು, ಈ ವಿಚಾರ ಗೊತ್ತಾಗಿದ್ದು ಚಿನ್ನಕನ್ನುಗೆ ಮೊನ್ನೆ ಮೊನ್ನೆಯಷ್ಟೇ. ಇದರಿಂದ ಕಂಗಾಲಾದ ಚಿನ್ನಕನ್ನು, ಜಿಲಾಧಿಕಾರಿಯನ್ನು ಭೇಟಿಯಾಗಿ 65,000 ರೂಪಾಯಿ ಹಳೆ ನೋಟು ಬದಲಿಸಿಕೊಡುವಂತೆ ಮನವಿ ಮಾಡಿದ್ದಾನೆ.
ನನಗೆ ನೋಟ್ ಬ್ಯಾನ್ ಆಗಿರುವ ವಿಚಾರಗೊತ್ತಿಲ್ಲ. ನನ್ನ ಬಳಿ 65,000 ರೂ ಇದ್ದು ಅದನ್ನು ಬದಲಿಸಿಕೊಡುವಂತೆ ಪತ್ರ ಮೂಲಕ ಮನವಿ ಮಾಡಿದ್ದಾನೆ. ಚಿನ್ನಕನ್ನು ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಅಧಿಕಾರಿಗೆ ಪತ್ರ ವರ್ಗಾಯಿಸಿದ್ದಾರೆ. ಅಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ ಗೂ ಪತ್ರ ಬರೆದು ತಿಳಿಸಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದ್ದು, ಚಿನ್ನಕನ್ನುವಿನ 65,000 ರೂಪಾಯಿ ಬದಲಿಸಿ ಕೊಡುತ್ತಾ ಕಾದುನೋಡಬೇಕಿದೆ.
ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಮಗು ಸೇರಿ ನಾಲ್ವರ ದುರ್ಮರಣ