ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಲಾಕ್ ಡೌನ್ ಸಡಿಲಿಕೆಯಾಗಿರುವ ಬೆನ್ನಲ್ಲೇ ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ಸರ್ಕಾರದ ಕ್ರಮದ ವಿರುದ್ಧ ಕಿಡಿಕಾರಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಮದ್ಯದಂಗಡಿಗಳನ್ನು ಈ ಸಂದರ್ಭದಲ್ಲಿ ಮುಚ್ಚದಿದ್ದರೆ ಎಐಎಡಿಎಂಕೆ ಪಕ್ಷ ಮುಂದೆ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಸ್ ನಂತಹ ಈ ಸಂದರ್ಭದಲ್ಲಿ ಸರ್ಕಾರ ಟಿಎ ಎಸ್ ಎಂಎಸಿ ಶಾಪ್ಗಳನ್ನ ಮತ್ತೆ ತೆರೆದರೆ ಅಧಿಕಾರಕ್ಕೆ ಮರಳುವ ಕನಸು ಕೈಬಿಡಬೇಕಾಗುತ್ತದೆ. ಸರ್ಕಾರಕ್ಕೆ ಖಜಾನೆ ತುಂಬಿಸಲು ಮದ್ಯದಂಗಡಿಯೇ ಬೇಕಾ? ವರಮಾನಕ್ಕಾಗಿ ಬೇರೆ ಉತ್ತಮ ಮಾರ್ಗ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಮಿಳುನಾಡಿನಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ತೆರೆಯಲು ಅಲ್ಲಿನ ಸರ್ಕಾರ ಮುಂದಾಗಿದೆ. ಆದರೆ, ಕೊರೋನಾ ಸೋಂಕು ಹರಡುವಿಕೆಯ ಅಪಾಯವಿರುವುದರಿಂದ ಮತ್ತು ಮದ್ಯದಂಗಡಿಗಳಲ್ಲಿ ಸರಿಯಾದ ಕೋವಿಡ್ ನಿಯಮಾವಳಿಗಳು ಪಾಲನೆಯಾಗುತ್ತಿಲ್ಲದ ಹಿನ್ನೆಲೆಯಲ್ಲಿ ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಈಗ ಸರ್ಕಾರ ಹೈಕೋರ್ಟ್ ತೀರ್ಪಿಗೆ ತಡೆ ಕೋರಿ ಸುಪ್ರೀಂಕೋರ್ಟ್ಮೆಟ್ಟಿಲೇರಿದ್ದು, ಲಿಕ್ಕರ್ ಶಾಪ್ಗಳನ್ನ ಮುಚ್ಚಿರುವುದರಿಂದ ಸರ್ಕಾರದ ಆದಾಯಕ್ಕೆ ಸಂಪೂರ್ಣ ಹೊಡೆತ ಬಿದ್ದಿದೆ. ಸರ್ಕಾರಕ್ಕೆ ಹಣದ ಅಗತ್ಯವಿದ್ದು, ಮದ್ಯದಂಗಡಿ ತೆರೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ